Showing posts with label ತಿಳಿಯನು ಎಂದೆಂದಿಗನ್ಯ pranesha vittala. Show all posts
Showing posts with label ತಿಳಿಯನು ಎಂದೆಂದಿಗನ್ಯ pranesha vittala. Show all posts

Monday, 11 November 2019

ತಿಳಿಯನು ಎಂದೆಂದಿಗನ್ಯ ankita pranesha vittala

by ಪ್ರಾಣೇಶದಾಸರು
ತಿಳಿಯನು ಎಂದೆಂದಿಗನ್ಯ | ರಂಗಒಲಿದ ದಾಸರು ಜಗನ್ಮಾನ್ಯ ||ಅಲವಮಹಾತ್ಮರೆಂಬ ಪುಣ್ಯ | ಕೀರ್ತಿಗಳನಿತ್ಯಕೇಳ್ವನರಧನ್ಯ ಪ

ಹಿರಣ್ಯಕಶ್ಯಪುಜ ಸಹ್ಲಾದನೇವೇ |ಎರಡನೆ ಜನ್ಮ ಶಲ್ಯನಾದ ||ಗುರುವಾದಿರಾಜರನರ್ಚಿಸಿದ |ಪುರಂದರದಾಸರಾಯರಲ್ಲುದಿಸಿದ1

ಅಯ್ದನೆಯ ರೂಪವೀಗಿಂದಂತೆ |ಬಹುದು ಏಳು ಜನ್ಮ ಮುಂದಂತೆ ||ಮೋದಾಭಿವೃದ್ಧಿಗೇನೋ ಅಂತೇ ಎಂಬ |ವಾದಿಗಿದೆಲ್ಲ ಅಂತಿಗಂತೆ 2

ದಾಸಕೂಟಸ್ಥರಿಗೀ ಮಾತು ಕೆಲವು |ದೇಶಗಳಲ್ಲಿ ಅನುಭವವಾಯ್ತು ||ಈ ಸುಕಥಾಲಾಪ ವಲ್ಲ್ಯಾಯಿತು ಶ್ರೀ ಪ್ರಾ |ಣೇಶ ವಿಠಲನಲ್ಲಿಹನಾತು 3
******