Showing posts with label ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ indiresha. Show all posts
Showing posts with label ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ indiresha. Show all posts

Monday, 2 August 2021

ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ ankita indiresha

ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ ಚದುರೆಯರ ಓಣಿಯಲಿ ಪ


ಕರದೊಳಗೆ ಕೊಳಲಿಹುದು ಚರಣದೊಳು ರುಳಿಗೆಜ್ಜೆಕೊರಳೊಳಗೆ ಸರಪದಕ ಗುರುಳು ಮುಖದಿಜರದೊಲ್ಲಿ ಹೊದ್ದಿಹನು ಸ್ಮರನ ಮೋಹಿಪ ರೂಪಸಿರಿಯ ಕಂಡರೆ ಅವನ ಪರರು ಬಿಡರಮ್ಮ 1

ವಾರಿಜಾಕ್ಷೆರೆ ಬಹಳ ಜಾರಚೋರೆನ್ನ ಮಗವಾರೆನೋಟದಿ ಮನಸು ಹಾರಿಸುವನುಸಾರಿದರೆ ಮನೆಗಳಿಗೆ ದ್ವಾರಯಿಕ್ಕುತೆ ಬನ್ನಿದೂರು ಪೇಳಲು ಕೇಳಿ ಸಾರಿದೆನು ಮೊದಲೆ 2

ಕಂದನಾಗುವ ಕ್ಷಣದಿ ಒಂದೆ ಪ್ರಾಯದ ಪುರುಷಸುಂದರಾಂಗಿಯಳಾಗಿ ಬರುವನಂದಬಾಲನ ಮಹಿಮೆ ಬಂದು ನಂಬಲಿ ಬೇಡಿಇಂದಿರೇಶನು ಬಹಳ ಮಂದಿ ಮೋಹಿಸುವ 3

****