..
kruti by radhabai
ಶ್ರೀ ರಾಘವೇಂದ್ರರ ಪಾದವನಂಬಿರೋ ಜಗದ್ಗುರುರಾಜರ
ಸೇವೆ ಮಾಡಿರೊ ಪ
ನಂಬಿದ ಭಕ್ತರ ಪೊರೆಯುವಾ ಹಗಲಿರುಳು
ಬೆಂಬಿಡದಲೆ ಕಾಯುತ್ತಿರುವಾ
ಸಕಲ ಸಂಪತ್ತು ಯಿತ್ತು ಸಲಹುವಾ ನಮ್ಮ ಕರುಣಾ
ದೃಷ್ಟಿಯಿಂದ ನೋಡುತ್ತಲಿರುವಾ 1
ಬಂದ ಬಂದವರನ್ನು ಮುಂದಕ್ಕೆ ಕರೆವಾ
ಬಂದಾಪತ್ತುಗಳನೆಲ್ಲ ಕಳೆವಾ
ತಂದೆಯಂದದಿ ಕೈ ಪಿಡಿದಿರುವಾ ಇನ್ನೂ ಸಂದೇಹ
ವಿಲ್ಲಿದೆ ರಕ್ಷಿಸುವಾ 2
ಶ್ರೀ ರಾಮಚಂದ್ರನ ಪ್ರಿಯ ಭಕ್ತರೂ ಶ್ರೀ ರಾಘವೇಂದ್ರರು
ಆಶ್ರಿತ ಜನ ರಕ್ಷಕರಾಗಿಹರೂ ಬಂದು
ಮಂತ್ರಾಲಯದಿ ನೆಲೆಸಿಹರೂ 3
***