Showing posts with label ಯಾವಾಗ ಬರುವನಂತೆ ನಿನ್ನಯ govinda. Show all posts
Showing posts with label ಯಾವಾಗ ಬರುವನಂತೆ ನಿನ್ನಯ govinda. Show all posts

Saturday, 16 November 2019

ಯಾವಾಗ ಬರುವನಂತೆ ನಿನ್ನಯ ankita govinda

by ಗೋವಿಂದದಾಸ
ಯಾವಾಗ ಬರುವನಂತೆ ನಿನ್ನಯ ರಮಣ-ಗ್ಯಾವ ರೂಪವೊ ಕಾಂತೆ ಪ

ದೇವರ ದೇವನಂತೆ ಜೀವಿಗಳೊಡೆಯನಂತೆಭಾವಜನಯ್ಯನಂತೆ ದೇವಿ ನಿನ್ನದು ಕಾಂತೆ ಅ.ಪ

ನೀರೊಳಗಿರುವನಂತೆ ಬೆನ್ನೊಳುಘೋರಭಾರವ ತಾಳ್ದನಂತೆ ಕೋಟೆಯೊಳಗೆಕ್ರೂರದೈತ್ಯನ ಸೀಳ್ದನಂತೆಸಾರಿ ಕಂಬದಿ ಕರುಳ ಹಾರ ಧರಿಸಿರ್ದನಂತೆ 1

ಬಡವ ಬ್ರಾಹ್ಮಣನಂತೆ ಹಡೆದವಳನ್ನುಕಡಿದ ಮಹಾವೀರನಂತೆಅಡವಿಯೊಳ್ಕೋಡಗಬಲದೊಡನಿರ್ಪಂತೆಪೊಡವಿಯೊಳ್ ನರನ ಬಂಡಿ ಹೊಡೆಯುವನಂತೆ 2

ಬತ್ತಲೆಯಿರುವನಂತೆ ಅಲ್ಲಲ್ಲಿತೇಜಿಹತ್ತಿ ಸುತ್ತಾಡುವನಂತೆಕುತ್ತಿಗೆ ಮೇಲಣ ಕುದುರೆಯ ಮುಖವಂತೆಉತ್ತಮನಂತೆಶ್ರಿೀನಿವಾಸ ಗೋವಿಂದನಂತೆ 3
********