..
kruti by ಬೇಲೂರು ವೈಕುಂಠ ದಾಸರು belur vaikunta dasaru
ಶ್ರೀಕರಾಂಬುಜರಂಜಿತ ಪಾದಮೆಯಾ
ನಾಕಾಧಿಪ ಮುನಿಜನವರದಾಮೆಯಾ ಪ
ಲೋಕೇಶನುತ ಕಂಜಲೋಚನಾಮೆಯಾ
ಸಾಕಾರ ಭೋಗೀಶ್ವರ ಮಂಜುಳಚರಣಾ ಅ.ಪ
ಉದಧಿ ಗಂಭೀರ ಭೀರಹಿತ ಹಿತಚಾರಿತ್ರ
ಕದನ ಕರ್ಕಶ ಭೀಮ ರತಿಜಿತಹಿತಾ
ಮದಿತಕೌರವನಾತ್ತ ಚರಣವಿಖ್ಯಾತಾ
ಉದಿತ ಭಾಸ್ಕರಹಿತನಾಥನಾಧಾರೇ 1
ಶರಣಾಗತಜನ ಶಾಂತಿದಾಂತಿಜೀಯಾ
ಗುರುಕಾಮದ ಸರ್ವಕೋವಿದಾಯೇಮಾ
ನರಕೇಸರಿ ರೂಪ ನಾರದ ವಂದ್ಯ ಶ್ರೀ
ವರವೇಲಾಪುರವಾಸ ವೈಕುಂಠ ಸರ್ವೇಶಾ2
***