ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ ॥ ಪ ॥
ಆಡುತ ವರಗಳ ನೀಡುತ ದಯದಿಂದ
ಪಾಡುತ ನಮ್ಮ ಲಕ್ಷ್ಮೀ ನಡು ಮನೆಗಿಂದು || ಅ.ಪ||
ಹೆಜ್ಜೆಯ ನೀಡುತಲಿ ವಜ್ರದ ಗೆಜ್ಜೆಯು ಕಾಲ್ಗಳಲಿ |
ಸಜ್ಜನರ ಕೈ ಸೇವೆಯಗೊಳ್ಳುವ |
ಗೆಜ್ಜೆ ಕಾಲ್ ಧ್ವನಿ ಘಲ್ ಘಲ್ ಘಲ್ ಎಂದು ॥೧||
ಕಂಕಣ್ ಕೈಗಳಲ್ಲೀ ಹೊಳೆಯುವ ವಂಕಿಯು ತೋಳಲ್ಲೀ |
ಪಂಕಜ ಮುಖಿಯೇ ಸಂಭ್ರಮದಿಂದ |
ಕಂಕಣ ಕಿಣಿ ಕಿಣಿ ಕಿಣಿ ಕಿಣಿ ಕಿಣಿ ಎಂದು ||೨ ||
ಥಳ ಥಳ ಹೊಳೆಯುತಲಿ ಎಮ್ಮಯ್ಯ ಕೋಟಿ ಪ್ರಕಾಶದಲಿ |
ತರಿಕಿಟ ಧಿಮಿ ಧಿಮಿ ಧಿಮಿತ ಧಿಮಿತ ಎಂದು |
ತಾಳ ಗತ್ತಿನಿಂದ ಥೈ ಥೈ ಥೈ ಎಂದು || ೩ ||
ಜಗವ ಉದ್ಧರಿಸುತಲಿ ನೆಲೆಸಿಹ ಕೋಲ್ಹಪುರದಲ್ಲಿ |
ಜನರು ನೋಡಿ ಜಯ ಜಯ ಜಯ ಜಯ ಎಂದು |
ಜಗದಂಬೆ ತಾಯೆ ಝಣಕು ಝಣಕು ಎಂದು ||೪||
ಸನ್ನುತಿ ಪುರವಾಸಿ ನೆಲೆಸಿಹ ಭೀಮಾತೀರದಲಿ |
ಭಕುತರ ಕರದಿಂ ಸೇವೆಯಗೊಳ್ಳುತ |
ಹರಿ ವಿಠಲೇಶನ ಮೋಹದ ರಾಣಿ || ೫ ||
***
Āḍuta bāram’ma nali nalidāḍuta bāram’ma॥ pa॥
āḍuta varagaḷa nīḍuta dayadinda pāḍuta nam’ma lakṣmī naḍu manegindu || a.Pa||
hejjeya nīḍutali vajrada gejjeyu kālgaḷali |
sajjanara kai sēveyagoḷḷuva |
gejje kāl dhvani ghal ghal ghal endu॥1||
kaṅkaṇ kaigaḷallī hoḷeyuva vaṅkiyu tōḷallī |
paṅkaja mukhiyē sambhramadinda |
kaṅkaṇa kiṇi kiṇi kiṇi kiṇi kiṇi endu ||2 ||
thaḷa thaḷa hoḷeyutali em’mayya kōṭi prakāśadali |
tarikiṭa dhimi dhimi dhimita dhimita endu |
tāḷa gattininda thai thai thai endu || 3 ||
jagava ud’dharisutali nelesiha kōl’hapuradalli |
janaru nōḍi jaya jaya jaya jaya endu |
jagadambe tāye jhaṇaku jhaṇaku endu ||4||
sannuti puravāsi nelesiha bhīmātīradali |
bhakutara karadiṁ sēveyagoḷḷuta |
hari viṭhalēśana mōhada rāṇi || 5 ||
***