ಪುರಂದರದಾಸರು
ಬಾಯ್ಬಡಿಕರಿಂದ ನಾನು ಬದುಕಿದೆನು - ಅವರು -|ಮಾಡಿದುಪಕಾರವ ಮರೆಯೆ ಶ್ರೀ ಹರಿಯೆ ಪ
ಹಂಗಿಸಿ ಹಂಗಿಸಿ ಮನವ ಹರಿಯಲಿ ನಿಲಿಸಿದರು |ಭಂಗಿಸಿ ಭಂಗಿಸಿ ಬಯಲಾಸೆ ಕೆಡೆಸಿದರು ||ಕಂಗೆಡಿಸಿ ಕಂಗೆಡಿಸಿ ಕಾಮ ಕ್ರೋಧ ಬಿಡಿಸಿದರು |ಹಂಗಿಸಿದವರೆನ್ನಪರಮಬಂಧುಗಳು1
ಜಾಡಿಸಿ ಜಾಡಿಸಿ ಎನ್ನ ಜನ್ಮಗಳ ಕಳೆದರು |ಹೂಡಿಸಿ ಹೂಡಿಸಿ ಹುಟ್ಟು ಹೊಂದುಗೊಳಿಸಿದರು ||ಪೀಡಿಸಿ ಪೀಡಿಸಿ ಎನ್ನ ಪ್ರಯತ್ನವ ಕಳೆದರು |ಕಾಡಿ ಕಾಡಿಕೈವಲ್ಯಪದವಿತೋರಿದರು2
ಕಾಸು ಮುಟ್ಟಿದಾಗಕಾಯಪ್ರಾಯಶ್ಚಿತ್ತಕಿಕ್ಕಿದರು |ದೂಷಿಸಿ ದೂಷಿಸಿನಿರ್ದೋಷಮಾಡಿದರು ||ಲೇಸನು ಕೊಡು ನಮ್ಮಪುರಂದರವಿಠಲನೆ ||ದಾಸನೆಂದೆನಿಸುವರನುದಿನದಲಿ ಎನ್ನ 3
***

pallavi
bAi baDikarnida nAnu badukidenu avaru mADidupakArava mareya shrI hariye
caraNam 1
hangisi hangisi manava hariyali nilisidaru bhangisi bhangisi bayalAse keDisidaru
gangeDisi gangeDisi kAma krOdha biDisidaru hangisidavarenna parama bandhugaLu
caraNam 2
jADisi jADisi enna janmagaLa kaLedaru huDisi huDisi huTTu hondukoLisidaru
pIDisi pIDisi enna prayatnava kaLedaru kADi kADi kaivalya padavi tOridaru
caraNam 3
kAsu muTTidAga kAya prAyashcittakikkidaru dUSisi dUSisi nirdOSa mADidaru
lEsanu koDu namma purandara viTTlane dAsanendenisuvaranu dinadali enna
***