Showing posts with label ಸಾಲವ ಕೊಡದಿದ್ದರೆ ನಿನಗೆ ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ vijaya vittala. Show all posts
Showing posts with label ಸಾಲವ ಕೊಡದಿದ್ದರೆ ನಿನಗೆ ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ vijaya vittala. Show all posts

Thursday 17 October 2019

ಸಾಲವ ಕೊಡದಿದ್ದರೆ ನಿನಗೆ ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ankita vijaya vittala

ವಿಜಯದಾಸ
ಸಾಲವ ಕೊಡದಿದ್ದರೆ ನಿನಗೆ |
ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಪ

ಏಸು ದಿವಸದಿಂದ ಎಲ್ಲರ ಸೇವಿಸಿ |
ಕಾಸು ಕಾಸಿಗೆ ನಾನು ಕೂಡಹಾಕಿ |
ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು |
ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ 1

ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ |
ಗಡ್ಡ ಬೀಳುವೆನೊ ಸಾಲವ ತೀರಿಸೊ |
ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ |
ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು 2

ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ
ಕೆ ನಿಲ್ಲದೆ ನಿನಗೆ ಸಾಲವಿತ್ತೆ |
ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು |
ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ3

ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು |
ಮೇಲೆ ಮೇಲೆ ಬಿದ್ದು ನಿನ್ನ |
ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ 4

ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ |
ನೆತ್ತಿಯೆತ್ತಿ ಮೋರೆ ತೋರ ಬೇಕೊ |
ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ |
ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು 5

ಬಡತನ ಬಂದರಾಗ ನಾ ನಿನಗೆ ಬಾಯಿ |
ಬಿಡುವೆನೆ ದೈನ್ಯದಲಿ ಭಾಗ್ಯವಂತಾ |
ತಡ ಮಾಡಲಾಗದು ಕೊಡು ಎನ್ನ ಒಡಿವೆ |
ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ 6

ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು |
ಸಂತತ ಸಂತರ ಮುಂದೆ ನುಡಿದು ಬಿಡುವೆ |
ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ |
ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ 7
*********