Showing posts with label ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ varadesha vittala. Show all posts
Showing posts with label ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ varadesha vittala. Show all posts

Sunday, 1 August 2021

ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ ankita varadesha vittala

 ..

kruti by ವರದೇಶ ವಿಠಲರು varadesha vittala dasaru


ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ

ಜ್ಞಾನ ಪೂರ್ವಕದಿ ಶ್ರೀನಿವಾಸನಗುಣ

ಗಾನ ಮಾಡುವಮತಿ

ಸಾನುರಾಗದಿ ಕೊಡು ಪ


ಶರಧಿಯ ಲಂಘಿಸಿಧರಿಜೆ ದೇವಿಪದ -

ಕ್ಕೆರಗಿ ಮುದ್ರಿಕೆ ಕೊಟ್ಟಹರುಷದಿ ಹನುಮನೆ 1


ಹೇಮನಗರ ದಹಿಸಿ

ಸತ್ವರ ರಾಮ ಪದಕೆ ನಮಿಸಿ

ಪ್ರೇಮದಿ ಜಾನಕಿ ಕ್ಷೇಮವ ತಿಳುಹಿಸಿ

ತಾಮರಸಜಪದ ನೇಮದಿ ಐದಿದ 2


ಕುಂತಿಗರ್ಭದಿ ಜನಿಸಿ

ರುಕ್ಮಿಣಿಕಾಂತನಣುಗನೆನಿಸಿ

ಅಂತಕಾತ್ಮಜನ ಸಂತತ ಸಲಹಿದೆ

ಹಂತಧಾರ್ತೃರಾಷ್ಟ್ರಾಂತಕ ಭೀಮನೆ 3


ದೇಶಿಕಪತಿಯನಿಸಿ

ಬದರಿನಿವಾಸನ ಪದ ಭಜಿಸೆ

ವಾಸುದೇವಸರ್ವೇಶನೆಂದರುಹಿದೆ

ದೂಷಿತ ಮತ ತಮ ನೇಸರಮಧ್ವನೆ 4


ಕಾಮಕ್ರೋಧದಿ ಬೆಂದೆ

ನಾ ಬಲು ತಾಮಸದಲಿ ನೊಂದೆ

ಶ್ರೀ ಮನೋಹರ ವರದೇಶ ವಿಠಲನ

ನಾಮ ಬರೆದೆ ಕುಪ್ಪೀ ಭೀಮನೆ ಪಾಲಿಸು 5

***