ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಪಾದವ ನಂಬಿರೋ | ಮನುಜರೆಲ್ಲ | ಹರಿಯಲ್ತೆ ಹರಿಗರ್ವ ಹರಿಸಿ ಗೋಕುಲದೀ | ವಿ | ಹರಿಸಿ ಹರಿಜಳಲ್ಲಿ ಹರಿಮೆಟ್ಟಿನಲಿವಂಥ ಪ
ಸೋಮಜ ಭವನ ಪದಾ | ಸೇವೆಗೆ ಮೆಚ್ಚಿ | ಸೋಮ ಪುತ್ರಗೆ ನೀಡಿದಾ | ಸೋಮನಾ ಭಂಡಾರಿಯನೆ ಮಾಡಿ ದಯದಿಂದ | ಸೋಮಜಾನನಾ ಪೂರ್ಣ ಸೋಮಚಕೋರವಾ 1
ಕಮಲಾರಿ ಧರ ಸೇವ್ಯನು | ಶಂಖ ಚಕ್ರ | ಕಮಲಾಗದಾಧರನು | ಕಮಲಾಂಘ್ರೀಯನಖ ಕಮಲದಿ ಜನಿಸಿದಾ | ಕಮಲದಿ ಮೂಜಗ ಕಮಲಗತಿಯ ನೀವ 2
ಗೋಪೆಸರನ ಪಿತನ | ಉದ್ಧರಿಸಲು | ಗೋಪಾದ ತ್ರಯ ಕೃತನ | ಗೋಪಾದಿವಿನುತ ಮಹಿಪತಿಸುತ ಪ್ರಭು | ಗೋಪಕೋಟಿ ತೇಜ ಗೋಪಾಲ ನೆನಿಸುವ 3
***