RAO COLLECTIONS SONGS refer remember refresh render DEVARANAMA
ಹರಿಯ ಭಜನೆ ಮಾಡೋ ನಿರಂತರ ಪ.
ಪರಗತಿಗಿದು ನಿರ್ಧಾರ ಅ.ಪ.
ಮೊದಲೆ ತೋರುತದೆ ಮಧುರ ವಿಷಯಸುಖ
ಕಡೆಯಲಿ ದುಃಖ ಅನೇಕ 1
ವೇದಶಾಸ್ತ್ರಗಳನೋದಿದರೇನು
ಸಾಧನಕಿದು ನಿರ್ಧಾರ 2
ಸಾರವೊ ಬಹುಸಂಸಾರ ವಿಮೋಚಕ
ಸೇರೊ ಶ್ರೀಹಯವದನನ್ನ 3
***