ಮೂಲೋಕದೊಳಗೆ ಮುಕುಂದನೆ ದೈವವಿದ-
ಕಾಲೋಚನೆಯ ಮಾಡಬೇಡ ಇವ
ಲೋಲಾಕ್ಷಿ ಎಂದೆಂದು ಬಿಡ ಅಲ್ಲದಿದ್ದರೆ
ಮೇಲಣ ಸಂಪದವ ಕೊಡ ಇಂಥವನಾವ ಪ.
ಆಡಲೇಕಿನ್ನು ಸಖಿ ಅಂಜಿದವನಂತೋಡುವ
ಕಾಡುವ ಖಳನಾಗಿ ನಿತ್ತ (ನಿಂತ?) ಇವ
ರೂಢಿಯೊಳಗೆ ಬಲುದೈತ್ಯ ಇದನೋಡಿ
ಪಾಡುವರು ಸುಖ ನಲಿವುತ್ತ ಇಂಥವನಾವ 1
ಕಾಳಿಯ ನಾಗನ ತುಳಿದ ಮತ್ತವಗೊಲಿದ
ಬಾಲಗೋಪಾಲ ಸುಕೃಪಾಳು ಇವ
ನಾಳು ನಾನೆಂದು ಸಖಿ ಬಾಳು ಗಿರಿಯ ಭಾರವ
ತಾಳಿತಿವನದೊಂದು ತೋಳು ಇಂಥವನಾವ 2
ಕಣ್ಣಾರೆ ಕಂಡೆವಲ್ಲ ಮಣ್ಣಮೆದ್ದೆಯೆನಲು
ಸಣ್ಣ ಬಾಯೊಳು ಸರ್ವಜಗವ ಎಲೆ
ಹೆಣ್ಣೆ ತೋರಿ ತೊಳೆದ ನಮ್ಮಘವ ಇನ್ನು ಹಯವ
ದನ್ನ ತನ್ನವನೆನ್ನಾಳುವ ಇಂಥÀವನಾವ 3
***