..
kruti by rukmangadaru
ಪರಮ ಪುರುಷನ ನೆನೆಯಿರೋ | ನರಕ ಭೀತ ಕಳ್ಳನರರೇ ನೀವು || ಶರಣಾಗತಾರ್ಥ ಪಾಲಕನೆಂಬಬಿರುದು ಇವನಿಗಲ್ಲದಿನ್ನೊಬ್ಬಗುಂಟೇ ಪ
ಹರಿಯೆಂದು ಹೃದಯದಲಿ ಸ್ಮರಿಸಿ ಕರಿರಾಜ ಕರವೆತ್ತಿಕರೆಯೆ | ಉರದಲೊರಗಿಹ ಸಿರಿಗೆ ಸರಿಸಿ | ಸಾರಂಗರಿಯ ಧರಿಸಿಗರುಡನ ಮರೆತು | ಬರಿ ಗಾಲಿಲೆ ಬರುವಾ 1
ಮಂಗಳನು ಜರಿದು ಜಗವು ಕರುಣವಿಲ್ಲದೆ |ಕರಿಣಿಗಳುದಕದ ಹೊಲಸು ಹೇಸಿಕೆಗೆ |ಬೇಸರಗೊಳ್ಳದೆ ಬಂದವನ ಪುಷ್ಕರವೆತ್ತಿ |ಚಕ್ರದಿ ನಕ್ರನ ಮುಖ ಕಡಿವ 2
ಮರಣಕ್ಯಾಕಂಜಿದೆಂತೆಂದು ಕರಿಯ | ಕಿರಿ ಬೆವರೊರಸಿವರಿಸಿ ಕರದಿ ಸುರರು ಕಿನ್ನರರು ಬೆರಗು ಬೀರುತಲಿರಲುವರ ಚತುರ್ಭುಜ ರುಕ್ಮ ವಸನಗಳು ಕೊಡುವ3
***