..
ರಮೆ ವೆಂಕಟರಮಣನರಸಿಯೇ
ನಮಿಸುವೆ ನಮ್ಮಮ್ಮ
ಅಮಿತ ಮಹಿಮಳೇ ಆದಿ ಲಕುಮಿಯೇ
ಅನುದಿನ ಸಲಹಮ್ಮ 1
ಅಜತ ನಾಮಕನೆ ಆದಿ ದೈವವೆಂದು
ತ್ರಿಜಗಮ ತಿಳಿವಂತೆ
ನಿಜ ಪುರುಷನಿಗೆ ವನಮಾಲೆಯ ಹಾಕಿ
ಭಜಿಸಿದೆ ಬಲವಂತೆ 2
ಕಮಲಜ ಮೊದಲಾದ ಸುಮನಸರಿಂದಲಿ
ಕ್ರಮದಿ ಪೂಜೆಗೊಂಬೆ
ಸಮನಿಲ್ಲದ ಸೌಭಾಗ್ಯವ ಕೊಡು
ನೀ ಮಹ ಜಗದಂಬೆ 3
ಕಮಲವಾರಿಧೆ ಕಮಲಲೋಚನೆ
ಕರವೀರ ಪುರಧೀರೆ
ವರ ಕದರುಂಡಲಗಿ ಹನುಮಯ್ಯನೊಡೆಯನಉರದೊಳು ಸ್ಥಿರವಾಸೆ 4
***