ಲಂಬೋಧರನೇ ನಿನ್ನನೇ ನಂಬಿದೆನೋ
ಇಂದೇ ಮುಂದೆ ಬಂದೆನ್ನ ಕಾಯೋ
ಸಿದ್ದಿ ವಿನಾಯಕ ವಿದ್ಯೆಯ ನೀಡಿ
ಉದ್ದರಿಸೆನ್ನನು ನೀ ಪೊರೆಯೋ ||1||
ವಿಶಿಷ್ಟ ವದನನೇ ವಿಘ್ನುವಿದೂರನೇ
ವಿಶ್ವ ಪರೇಶನೇ ಪೊರೆಯೆನ್ನನು
ಅಂಬಿಕಾ ತನಯನೆ ನಂಬಿದೆ ನಿನ್ನನು
ಬೆಂಬಿಡದೆಲೇ ನೀನು ಪೊರೆಯೆನ್ನನು ||2||
ಆಕಾಶವ್ಯಾಪ್ತನೇ ಭಕುತಿಗೆ ಪ್ರಾಪ್ತಾನೆ
ಪ್ರಾರ್ಥಿಪ ಜನರಿಗತಿಪ್ರೀತನೆ
ಪಾರ್ಥಸಾರಥಿ ವಿಠ್ಠಲನ ನಿಜಮಂದಿರ
ಕಾಣುವ ಅನುಗ್ರಹ ಮಾಡುತ ಪೊರೆಯುವನೇ ||3||
***
lambodharane ninnane nambideno
inde munde bandenna kayo
siddi vinayaka vidyeya needi
uddarisennanu nee poreyo ||1||
vishista vadanane vignavidurane
vishwa pareshane poreyennanu
ambika tanayane nambide ninnanu
bembidadele neenu poreyennanu ||2||
akashavyapthane bhakuthige prapthane
prathipa janarigatipreethane
parthasarati vittalana nijamandira
kanuva anugraha madutha poreyuvane || 3||
***