by ವಾದಿರಾಜ
ಪೋ ಪೋಗೆಲೋ ಸಾ ಸಾರೆಲೊನಗೆಗಿಂತೆನಲು ಮುನಿದು ಪೋದನೆಮನುಮಥನಯ್ಯ ಕಾಣೆ ಪ.
ಎನ್ನ ಪೆಸರು ಮಾಧವನೆಂದೆಂಬರುಅನ್ಯರನೊಲ್ಲದೆ ನಿನ್ನೊಳು ಮನವಿಟ್ಟೆವನವ ತಿರುಗುವ ವಸಂತ ನೀನಾದರೆಮನೆಗ್ಯಾತಕೆ ಬಂದೆ 1
ವಕ್ರದ ನುಡಿಗಳ ನುಡಿಯದಿರೆನ್ನನುಚಕ್ರಧರನೆಂದೆಂಬರು ಎನ್ನನುರೊಕ್ಕಕ್ಕೆ ಮಡಕೆಯ ಮಾರುವ ಕುಂಬಾರಒಕ್ಕಲ ಮನೆಗೆ ಪೋಗೋ 2
ಹಿರಿಯರು ಹರಿಯೆಂದೆಂಬರು ಎನ್ನನುತರಳೆ ನೀನೇನಾದರೆ ಎಂದೆನದಿರುತರುಗಳೇರಿ ಕುಣಿದಾಡುವ ಕಪಿಗಳತೆರದೊಳಾಡು ಪೋಗು 3
ಸರ್ಪನÀ ಮಸ್ತಕದಲಿ ನಲಿದಾಡುವೆಅಲ್ಪಕನೆಂದು ನೀ ಬಗೆಯದಿರೆನ್ನನುತಪ್ಪದೆ ಗಗನದೊಳಿಪ್ಪ ಗರುಡನುಬಪ್ಪನೆ ಪುರದೊಳಗೆ 4
ಎನ್ನ ಮಹಂತರನಂತನೆಂದೆಂಬರುಮನ್ನ ಬಂದಂತೆ ನೀ ಮಾತುಗಳಾಡದಿರುಪನ್ನಂಗನಾದರೆ ಪಾತಾಳಕ್ಕೆ ಪೋಗುನಿನ್ನ ಸಂಗಕ್ಕೆ ಅಂಜುವೆ 5
ಕಡಲೊಳಗಿಪ್ಪನೆಂದೆಂಬರು ಎನ್ನನುಮಡದಿಯೇನಾದರು ಎಂದೆನ್ನದಿರುಮಡಿದು ಮಡಿದು ಹೋಹ ಮೀನು ಮೊಸಳೆಗಳಗಡಣವ ಕೂಡು ಪೋಗು 6
ಸಚರಾಚರಂಗಳ ಸೃಜಿಸಬಲ್ಲವನೆಂದುಸುಚರಿತ್ರ ದೇವತೆಯೆಂದೆಂಬರುಉಚಿತವೆ ಹೆಣ್ಣುಮಗಳ ಕೂಡೆ ಮೋಹದವಚನವು ನಿನಗೆ ರಂಗ ಪೋಗು 7
ಆಲದೆಲೆಯಮೇಲೆ ಮಲಗಿಪ್ಪ ವಸ್ತು ನಾನುಪಾಲಮಾರುವವರಿಗೆ ಪರತತ್ವನೆಂಬರುಕಾಲಬೆರಳ ಚುಂಬಿಸುವಗ್ಯಾತಕೆ ಗೋಪಾಲಬಾಲೆಯರಾಟ 8
ಮೈಯೊಳು ಸಾವಿರ ಕಣ್ಣುಗಳುಳ್ಳವನಯ್ಯನೆಂದು ದೇವತೆಗ-ಳ್ದಿವ್ಯಚಾರಿತ್ರ ದೇವತೆಯೆಂತೆಂಬರುಅಯ್ಯ ನೀನಾದರೆ ಅಹಲ್ಯಾದೇವಿಯಕಯ್ಯ ಪಿಡಿದ ಕಳ್ಳನೆ ಪೋಗು 9
ಕಂಗಳ ಕುಡಿನೋಟಗಳಿಂದ ತ್ರಿಜ-ಗಂಗಳನೆಲ್ಲವ ಸಂಹರಿಸುವೆÀ ನಾನುರಂಗ ನೀನಾದರೆ ಕೊಲೆಗಡುಕನು ನ-ಮ್ಮಂಗಳಕ್ಕೆ ಬರಬೇಡವೊ 10
ಸ್ವರ್ಗಕ್ಕೆ ಹೋದರೆ ನಿನ್ನವಗುಣವಿದುಅಗ್ಗಳಿಯದ ಹೊನ್ನನ್ಗೆ(?) ಬಗ್ಗುವಳಲ್ಲ ನೀಒಗ್ಗುವೆ ನಾ ನಿನಗಯ್ಯ ಸ್ವರ್ಗಾಪ-ವರ್ಗವ ಕೊಡುವವನೆ ಪೋ ಪೋ 11
ಒಲಿದು ನಾ ನಿನ್ನ ಮನೆಗಾಗಿ ಬಂದರೆಕಲಹದ ಮಾತುಗಳಾಡದಿರು ಎನ್ನಲಲನೆಉರದÀಲ್ಲಿದ್ದು ನಾಭಿಕಮಲದಿಂದಛಲದಿ ಮಗನ ಪಡೆದೆ 12
ಮುನಿಗಳರ್ಚಿಸುವ ಶ್ರೀಹಯವದನನು ನಾನುವನಿತೆಯೆನ್ನಿರವನು ಬಲ್ಲವರೆ ಬಲ್ಲರುಉಣಲೀಸೆ ಉಡಲೀಸೆ ತಲೆಯೂರಿ ತಪವನುವನದೊಳು ಮಾಡಿಸುವೆ 13
*******