Showing posts with label ವ್ಯಾಸರಾಯಾ gurujagannatha vittala vyasaraja stutih. Show all posts
Showing posts with label ವ್ಯಾಸರಾಯಾ gurujagannatha vittala vyasaraja stutih. Show all posts

Friday 27 December 2019

ವ್ಯಾಸರಾಯಾ ಅಸ್ಮದ್ಗುರೋ ankita gurujagannatha vittala vyasaraja stutih

ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ ||pa||

ವ್ಯಾಸರಾಯಾ ತವೋಪಾಸನ ಮಾಳ್ಪ
ವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ ||a.pa||

ದಾಸನಾಮಕ ದ್ವಿಜ ದೇಶಮುಖನ ಮನಿ –
ಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ ||1||

ಶ್ರೀಪಾದರಾಯರು ಈ ಪರಿ ನಿನ್ನನು
ಕಾಪಾಡಿ ನವವರ್ಷ ಭೂಪತಿ ಮಾಡಿದರೋ ||2||
ದಶಮವತ್ಸರದಲ್ಲಿ ಅಸಮ ಜ್ಞಾನಿ ಎನಿಸಿ
ವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ ||3||

ಅಲವಭೋಧರ ಮತ ಜಲಧಿನಿಶಾಕರ
ಕಲೆಯಂತೆ ದಿನದಿನದಲಿ ವೃದ್ಧನಾದೆ ನೀ ||4||

ಚಂಪಕ ತರು ಮುಖ್ಯ ಕಂಪಿತ ನದಿಯುತ
ಪಂಪಾಕ್ಷೇತ್ರದಿ ಮಹಾ ಸಂಪತ್ತಿನಿಂದಿದ್ದೆ ||5||

ಚಕ್ರತೀರ್ಥದಲಿ ಮರ್ಕಟ ಬರಲಂದು
ತರ್ಕಿಸಿ ಯಂತ್ರಸ್ಥ ಚಕ್ರದಿ ಬಂಧಿಸಿದೆ ||6||

ಪದ್ಮತೀರ್ಥದಲಿ ಇದ್ದ ನಿಜಗುರು
ಮಧ್ವರಾಯರ ತಂದು ಸಿದ್ಧಮಾಡಿ ಇಟ್ಟೆ ||7||

ಮಂದಜನಕೆÀ ಸುಧಾ ಛಂದಾಗಿ ಇದರರ್ಥ
ಪೊಂದದೆಂದು ನೀನು ಚಂದ್ರಿಕೆ ರಚಿಸಿದೆ ||8||

ಇನಿತೆ ಮಹಾಮಹಿಮೆ ಘನವಾಗಿ ಜನರಿU
ಅನುಭವ ಮಾಡಿಸಿದೆ ಅನುಪಮ ಚರಿತನೆ ||9||

ಇಭಗುಹವರತುಂಗ ಉಭಯ ಪ್ರವಾಹಮಧ್ಯ
ಶುಭಮಯ ಸ್ಥಳದಲ್ಲಿ ಅಭಯನಾಗಿ ನಿಂತೆ ನೀ ||10||

ಬಂದ ಜನರಘÀ ನಿಂದ್ರಾದೆ ಕಳೆಯುತ
ಛಂದದ ನವಶುಭವೃಂದಾವನದೊಳಿದ್ದೆ ||11||

ಇಂದು ನಿಮ್ಮಯ ಪಾದ ಪೊಂದಿ ಎನ್ನಯ ವೃಜಿನ –
ವೃಂದ ಪೋದವು ಅರ್ಕನಿಂದ ತಿಮಿರದಂತೆ||12||

ಮಂದಜನರಿಗೆ ಅಮಂದ ಭಾಗ್ಯನಿಧೆ
ವಂದಿಸಿ ಬೇಡುವೆ ನಂದದಿ ಸಲಹಯ್ಯ ||13||

ತಂದೆ ತಾಯಿಗಳು ಅಂದೆ ಬಿಟ್ಟರೆÀನ್ನ
ಇಂದು ರಕ್ಷಕರಿಲ್ಲವೆಂದು ನಿನ್ನನು ಸಾರ್ದೆ ||14||

ಪೊಂದಿ ಕೊಂಡಿರುವವನೆಂದು ಎನ್ನನು ಕೃಪೆ
ಯಿಂದ ಕರೆದು ಕಾಯೋ ನಂದಾದಾಯಕ ನೀನೆ||15||

ಇಷ್ಟದಾಯಕ ನಿನ್ನ ಮುಟ್ಟಿಭಜಿಪ ದಿವ್ಯ
ದೃಷ್ಟಿ ಪಾಲಿಸೊ ಸರ್ವೋತ್ಕøಷ್ಟ ಮಹಿಮ ನೀನೆ ||16||

ಮಾತು ಲಾಲಿಸೊ ನಿಜತಾತ ನೀನೆ ಸೀತಾ –
ನಾಥ ಗುರುಜಗನ್ನಾಥವಿಠಲನಾಣೆ ||17||
********