Showing posts with label ಜಯವ್ರಜಕ್ಕೆ ನೀ ಜನ್ಮಸೆಧಿಕವು ankita prasannavenkata ಕನ್ನಡ ಗೋಪೀಗೀತ JAYAVRAJAKKE NEE JANMASEDHIKAVU KANNADA GOPIGEETA. Show all posts
Showing posts with label ಜಯವ್ರಜಕ್ಕೆ ನೀ ಜನ್ಮಸೆಧಿಕವು ankita prasannavenkata ಕನ್ನಡ ಗೋಪೀಗೀತ JAYAVRAJAKKE NEE JANMASEDHIKAVU KANNADA GOPIGEETA. Show all posts

Sunday, 8 December 2019

ಜಯವ್ರಜಕ್ಕೆ ನೀ ಜನ್ಮಸೆಧಿಕವು ankita prasannavenkata ಕನ್ನಡ ಗೋಪೀಗೀತ JAYAVRAJAKKE NEE JANMASEDHIKAVU KANNADA GOPIGEETA


Audio by Mrs. Nandini Sripad

ಶ್ರೀ ಪ್ರಸನ್ನ ವೇಂಕಟದಾಸಾರ್ಯ ವಿರಚಿತ 

 ಕನ್ನಡ ಗೋಪೀಗೀತ 

ಜಯವ್ರಜಕ್ಕೆ ನೀ ಜನ್ಮಸೆಧಿಕವು 
ಶ್ರೀಯಳವಾಸವೂ ಶಾಶ್ವತಿಲ್ಲಿಯು 
ಪ್ರಿಯಗೆ ಪ್ರಾಣವ ಅರ್ಪಿಸಿ ನೋಡುವ 
ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾಗದೆ ॥ 1 ॥

ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ 
ವ್ರಜದ ದುಃಖವನ್ನೊದ್ದ ವೀರನೆ 
ಭಜಿಸು ಕಿಂಕರೀರ್ಬಾಸಖಾ ಹರೇ 
ಅಂಬುಜಸಮಾಸ್ಯವಾ ಅಕ್ಷಿಗೆ ತೋರ್ವನೇ ॥ 2 ॥

ಶರತ ಕಾಲದ ಸ್ವಬ್ಜಗರ್ಭದ 
ಸಿರಿಗೆ ಪೋಲುವಾಸ್ಯೇಕ್ಷೆ ಒಪ್ಪುವ 
ಸುರತಸ್ವಾಮಿ ನೀಂ ಶುಲ್ಕದಾಸೇರಂ 
ವರದ ಕಾಯದೇ ವಿಧಿಯದಾವದೈ ॥ 3 ॥

ವಿಷದ ನೀರ್ದೊರೆ ವ್ಯಾಳರಾಕ್ಷರಿಂ 
ವಿಷಮ ಗಾಳಿಮಳೆ ವೈದ್ಯುತಾಗ್ನಿಯಿಂ 
ವೃಷಭ ಮುಖ್ಯರಿಂ ವಿಶ್ವದುಃಖದಿಂ 
ವೃಷಭ ನಮ್ಮನೂ ರಕ್ಷಿಸಿದೆಯೋ ನೀ ॥ 4 ॥

ಅಖಿಳಜೀವರ ಅಂತರ್ನಿಯಾಮಕ 
ಗೋಕುಲರಕ್ಷಕರ್ಗೆಂತೋ ಬಾಲಕ 
ವಿಖನಸಾರ್ಚಿತಾ ಸರ್ವಗೋಪಿಕಾ 
ಸಖ ನೀ ಪುಟ್ಟಿದೆ ಸತ್ವವಂಶದಿ ॥ 5 ॥

ವರವರಿಷ್ಠನೇ ವೃಷ್ಣಿಕಾಂತನೇ 
ಶರಣು ಹೊಕ್ಕರಾ ಸಂಸೃತಿಹರಾ
ನೆರೆ ಕರಾಬ್ಜವಾನ್ನಿಟ್ಟು ಶೀರ್ಷವಾ 
ಆದರಿಸು ಶ್ರೀಕರಾ ಧರಿಸಿದಾ ಕರಾ ॥ 6 ॥

ಪ್ರಣತ ಪ್ರಾಣಿಗಳ ಪಾಪಕರ್ಷಕಾ 
ಆವಿನಬಳಿಲಿಪ್ಪ ವೈಷ್ಣವಾರ್ಚಿತಾ 
ಫಣಿ ಫಣೇಲಿಹ ಪಾದಪದ್ಮವಾ 
ಸ್ತನಕೆ ಹೊಂದಿಸೈ ತಾಪವಾರಿಸೈ ॥ 7 ॥

ಬುಧರ ಮೆಚ್ಚಿನಾ ಬುದ್ಧಿಕಾರಣಾ 
ಮಧುರ ಮಾತಿನಾಂಬುಜನೇತ್ರನೇ
ತ್ವದೀಯ ಆಜ್ಞೆಯ ತಪ್ಪದಿಪ್ಪುವರ್ಗೆ
ಅಧರ ಸೋಮವ ಊಡು ವೀರನೆ ॥ 8 ॥

ನಿನ್ನ ಕಥಾಮೃತ ನೀಚ ಜೀವನಂ 
ಮುನಿಗಳರ್ಥ್ಯವು ಮತ್ತೆ ಅಘಹರಂ
ಮನನ ಭವ್ಯವು ಮಹಾಭಾಗ್ಯವು 
ನೆನೆವ ಭಕ್ತರು ನಿತ್ಯದಾತರು ॥ 9 ॥

ಪ್ರಿಯ ನಿನ್ಹಾಸವು ಪ್ರೇಮನೋಟವು 
ದಯೆಯ ಕ್ರೀಡೆಯು ಧ್ಯಾನ ಶೋಭನ 
ನಯ ರಹಸ್ಯವು ನಮ್ಮ ಮನವು 
ಬೆಯಿಸಿ ನೊಯಿಸುವ ಬುದ್ಧಿ ಕೈತವ ॥ 10 ॥

ವ್ರಜವ ಬಿಟ್ಟು ಆವನ್ನು ಮೇಸುವಾಂ -
ಬುಜವ ಹೋಲುವಾ ಅಂಘ್ರಿಗೊತ್ತುವ 
ರಜತೃಣಾಶ್ಮವಾಲೋಚಿಸಿ ಮನ 
ಭಜಿಸದೈ ಸುಖ ಭೂಪತೆ ಸಖಾ ॥ 11 ॥

ದನದ ಧೂಳಿಯಿಂದೊಪ್ಪುವಳಕದಿಂ 
ವನಜ ವಕ್ತ್ರವ ವೀಕ್ಷಿಸಿ ಮನ 
ನೆನೆಸೆ ಇಚ್ಛಿಪೆವು ನಿನ್ನ ರೂಪವ 
ಇನನ ಅಸ್ತದಿ ವೀರ ನಿತ್ಯದಿ ॥ 12 ॥

ಭಕುತರಿಚ್ಛಿಪ ಅಬ್ಜೇಜನರ್ಚಿಪಾ 
ಪೃಥಿವಿಭೂಷಿಪಾ ಆಪತ್ತು ಪಾರಿಪಾ 
ಸುಖಕೆ ಶ್ರೇಷ್ಠವಾ ಸತ್ಪದಾಬ್ಜವಾ 
ಸುಕುಚದಲ್ಲಿಡೈ ಸುವ್ಯಥೇ ಸುಡೈ ॥ 13 ॥

ಸುರತ ಹುಟ್ಟುವಾ ಶೋಕವಟ್ಟುವಾ 
ಸ್ಮರಿಪ ವಂಶವಾ ಸಂಧಿಸೊಪ್ಪುವಾ 
ನರರ ರಾಗವನಟ್ಟಿ ಮರೆಸುವಾ 
ಅರಸ ನಿನ್ನ ಅಧರಾಂಕಿತ ಸುಧಾ ॥ 14 ॥

ಹಗಲು ಚರಿಸುವಿ ಹೋಗಿಯಾಟವಿ 
ಯುಗಕೆ ವೆಗ್ಗಳವು ಒಂದು ತೃಟಿಯದು 
ಮೊಗದ ಸಿರಿಗುರುಳ್ಮೆಚ್ಚಿ ನೋಡಲು 
ಮಗುಳೆ ಜಡದೊಳು ಮೋಹಿಪೆವೀಗಳು ॥ 15 ॥

ಎಳೆಯರಿನಿಯರ ಇಷ್ಟರಾಪ್ತರಾ 
ಬಲವ ಮೀರುತ ಬಂದೆವಚ್ಚುತಾ 
ಲಲಿತಗೀತದಾಲಾಪಮೋಹದಾ 
ಬಲೆರ ನೈಶಕೆ ಬಿಟ್ಟ ಕುಹಕವಾ ॥ 16 ॥

ಮುಗುಳು ನಗೆಮೊಗ ಮೋಹನೋಟವು 
ಮುಗುಳಗಣೆಯನ ಮೀಟುವಾಘನಾ
ಮಿಗಿಲು ನಿಮ್ಮದೆ ಮಾಟ ಕಂಡೆದೆ 
ಬಿಗಿದು ಅಪ್ಪುವೆಂಬೆಸೆವ ಮೋಹವು ॥ 17 ॥

ಆಕಳ ಕಾವರಾ ಮಂಗಳಾಹರಾ 
ಪ್ರಕಟ ನಿನ್ನದು ಪಾಪ ಪೋಪದು 
ಸ್ವಕೀಯರಾರ್ತಿಹಾ ಸರ್ವರೋಗಹಾ 
ನಿಖಿಳರಾಸೆಯಾ ಪೂರೈಸಯ್ಯ ನೀ ॥ 18 ॥

 ಪ್ರಸನ್ನವೇಂಕಟಾ ಪಶುಪ್ರಪಾಲಕಾ 
ಆಸೆಯರ್ಗೀತವಾ ಆರಿತು ಮಾಧವಾ 
ಪ್ರಸನ್ನವಾಗುವ ಆಪತ್ತು ಹರಿಸುವಾ 
ಶಶಿಮುಖಿಯರೊಳ್ ಸ್ನೇಹತಪ್ತರಾ ॥ 19 ॥
***


jayavrajakke nI janmasedhikavu |
SrIyaLavAsavU SASvatilliyu ||
priyage prANava arpasi nODuva |
priyara dRuShTige prAptiyA gade || 1 ||

svajana vismayA smitadalaLideyO |
vrajada duHKavannodda vIrane ||
Bajipa kiMkarIrbAsaKA harE |
aMbujasamAsyavA akShige tOrvanE || 2 ||

Sarata kAlada svabjagarBada |
sirige pOluvAsyEkShe oppuva ||
suratasvAmi nIM SulkadAsEraM |
varada kAyadE vidhiyadAvudai || 3 ||

viShada nIrdore vyALarAkShariM |
viShama gALimaLe vaidyutAgniyiM ||
vRuShaBa muKyariM viSvaduHKadiM |
vRuShaBa nammanU rakShisideyO nI || 4 ||

aKiLajIvara aMtarniyAmaka |
gOkularakShakargeMtO bAlaka ||
viKanasArcitA sarvagOpikA |
saKa nI puTTide satvavaMSadi || 5 ||

varavariShThanE vRuShNikAMtanE |
SaraNu hokkarA saMsRutiharA ||
nere karAbjavAnniTTu SIrShavA |
Adarisu SrIkarA dharisidA karA || 6 ||

praNata prANigaLa pApakarShakA |
AvinabaLilippa vaiShNavArcitA ||
PaNiya PaNEliha pAdapadmavA |
stanake hoMdisai tApavArisai || 7 ||

budhara meccinA buddhikAraNA |
madhura mAtinAMBOjanEtranE ||
tvadIya Aj~jeya tappadippuvarge|
adhara sOmava UDu vIrane || 8 ||

ninna kathAmRuta nIca jIvanaM |
munigaLarthyavu matte aGaharaM ||
manana Bavyavu mahABAgyavu |
neneva Baktaru nityadAtaru || 9 ||

priya ninhAsavu prEmanOTavu |
dayeya krIDeyu dhyAna SOBana ||
naya rahasyavu namma manavu |
beyisi noyisuva buddhi kaitava || 10 ||

vrajava biTTu Avannu mEsuvAM- |
bujava hOluvA aMGrigottuva ||
rajatRuNASmavAlOcisi mana |
Bajisadai suKa BUpate saKA || 11 ||

danada dhULiyiMdoppuvaLakadiM |
vanaja vaktrava vIkShisi mana ||
nenese icCipevu ninna rUpava |
inana astadi vIra nityadi || 12 ||

BakutaricCipa abjEjanarcipA |
pRuthiviBUShipA Apattu pAripA ||
suKake SrEShThavA satpadAbjavA |
sukucadalliDai suvyathE suDai || 13 ||

surata huTTuvA SOkavaTTuvA |
smaripa vaMSavA saMdhisoppuvA ||
narara rAgavanaTTi maresuvA |
arasa ninna adharAMkita sudhA || 14 ||

hagalu carisuvi hOgiyATavi |
yugake veggaLavu oMdu tRuTiyadu ||
mogada siriguruLmecci nODalu |
maguLe jaDadoLu mOhipevIgaLu || 15 |

|eLeyariniyara iShTarAptarA |
balava mIruta baMdevaccutA ||
lalitagItadAlApamOhadA |
balera naiSake biTTa kuhakavA || 16 ||

muguLu nagemoga mOhanOTavu |
muguLagaNeyana mITuvAGanA ||
migilu nimmade mATa kaMDede |
bigidu appuveMbeseva mOhavu || 17 ||

AkaLa kAvarA maMgaLAharA |
prakaTa ninnadu pApa pOpadu ||
svakIyarArtihA sarvarOgahA |
niKiLarAseyA pUraisayya nI || 18 ||

prasannaveMkaTA paSuprapAlakA |
AseyargItavA Aritu mAdhavA ||
prasannavAguva Apattu harisuvA |
SaSimuKiyaroL snEhataptarA || 19 ||
***

ಪ್ರಸನ್ನ ವೇಂಕಟದಾಸಾರ್ಯ ಕೃತ 
ಕನ್ನಡ ಗೋಪೀಗೀತ 

ಜಯವ್ರಜಕ್ಕೆ ನೀ ಜನ್ಮಸೆಧಿಕವು |
ಶ್ರೀಯಳವಾಸವೂ ಶಾಶ್ವತಿಲ್ಲಿಯು ||
ಪ್ರಿಯಗೆ ಪ್ರಾಣವ ಅರ್ಪಸಿ ನೋಡುವ |
ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾ ಗದೆ || ೧ ||

ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ |
ವ್ರಜದ ದುಃಖವನ್ನೊದ್ದ ವೀರನೆ ||
ಭಜಿಪ ಕಿಂಕರೀರ್ಬಾಸಖಾ ಹರೇ |
ಅಂಬುಜಸಮಾಸ್ಯವಾ ಅಕ್ಷಿಗೆ ತೋರ್ವನೇ || ೨ ||

ಶರತ ಕಾಲದ ಸ್ವಬ್ಜಗರ್ಭದ |
ಸಿರಿಗೆ ಪೋಲುವಾಸ್ಯೇಕ್ಷೆ ಒಪ್ಪುವ ||
ಸುರತಸ್ವಾಮಿ ನೀಂ ಶುಲ್ಕದಾಸೇರಂ |
ವರದ ಕಾಯದೇ ವಿಧಿಯದಾವುದೈ || ೩ ||

ವಿಷದ ನೀರ್ದೊರೆ ವ್ಯಾಳರಾಕ್ಷರಿಂ |
ವಿಷಮ ಗಾಳಿಮಳೆ ವೈದ್ಯುತಾಗ್ನಿಯಿಂ ||
ವೃಷಭ ಮುಖ್ಯರಿಂ ವಿಶ್ವದುಃಖದಿಂ |
ವೃಷಭ ನಮ್ಮನೂ ರಕ್ಷಿಸಿದೆಯೋ ನೀ || ೪ ||

ಅಖಿಳಜೀವರ ಅಂತರ್ನಿಯಾಮಕ |
ಗೋಕುಲರಕ್ಷಕರ್ಗೆಂತೋ ಬಾಲಕ ||
ವಿಖನಸಾರ್ಚಿತಾ ಸರ್ವಗೋಪಿಕಾ |
ಸಖ ನೀ ಪುಟ್ಟಿದೆ ಸತ್ವವಂಶದಿ || ೫ ||

ವರವರಿಷ್ಠನೇ ವೃಷ್ಣಿಕಾಂತನೇ |
ಶರಣು ಹೊಕ್ಕರಾ ಸಂಸೃತಿಹರಾ ||
ನೆರೆ ಕರಾಬ್ಜವಾನ್ನಿಟ್ಟು ಶೀರ್ಷವಾ |
ಆದರಿಸು ಶ್ರೀಕರಾ ಧರಿಸಿದಾ ಕರಾ || ೬ ||

ಪ್ರಣತ ಪ್ರಾಣಿಗಳ ಪಾಪಕರ್ಷಕಾ |
ಆವಿನಬಳಿಲಿಪ್ಪ ವೈಷ್ಣವಾರ್ಚಿತಾ ||
ಫಣಿಯ ಫಣೇಲಿಹ ಪಾದಪದ್ಮವಾ |
ಸ್ತನಕೆ ಹೊಂದಿಸೈ ತಾಪವಾರಿಸೈ || ೭ ||

ಬುಧರ ಮೆಚ್ಚಿನಾ ಬುದ್ಧಿಕಾರಣಾ |
ಮಧುರ ಮಾತಿನಾಂಭೋಜನೇತ್ರನೇ ||
ತ್ವದೀಯ ಆಜ್ಞೆಯ ತಪ್ಪದಿಪ್ಪುವರ್ಗೆ|
ಅಧರ ಸೋಮವ ಊಡು ವೀರನೆ || ೮ ||

ನಿನ್ನ ಕಥಾಮೃತ ನೀಚ ಜೀವನಂ |
ಮುನಿಗಳರ್ಥ್ಯವು ಮತ್ತೆ ಅಘಹರಂ ||
ಮನನ ಭವ್ಯವು ಮಹಾಭಾಗ್ಯವು |
ನೆನೆವ ಭಕ್ತರು ನಿತ್ಯದಾತರು || ೯ ||

ಪ್ರಿಯ ನಿನ್ಹಾಸವು ಪ್ರೇಮನೋಟವು |
ದಯೆಯ ಕ್ರೀಡೆಯು ಧ್ಯಾನ ಶೋಭನ ||
ನಯ ರಹಸ್ಯವು ನಮ್ಮ ಮನವು |
ಬೆಯಿಸಿ ನೊಯಿಸುವ ಬುದ್ಧಿ ಕೈತವ || ೧೦ ||

ವ್ರಜವ ಬಿಟ್ಟು ಆವನ್ನು ಮೇಸುವಾಂ- |
ಬುಜವ ಹೋಲುವಾ ಅಂಘ್ರಿಗೊತ್ತುವ ||
ರಜತೃಣಾಶ್ಮವಾಲೋಚಿಸಿ ಮನ |
ಭಜಿಸದೈ ಸುಖ ಭೂಪತೆ ಸಖಾ || ೧೧ ||

ದನದ ಧೂಳಿಯಿಂದೊಪ್ಪುವಳಕದಿಂ |
ವನಜ ವಕ್ತ್ರವ ವೀಕ್ಷಿಸಿ ಮನ ||
ನೆನೆಸೆ ಇಚ್ಛಿಪೆವು ನಿನ್ನ ರೂಪವ |
ಇನನ ಅಸ್ತದಿ ವೀರ ನಿತ್ಯದಿ || ೧೨ ||

ಭಕುತರಿಚ್ಛಿಪ ಅಬ್ಜೇಜನರ್ಚಿಪಾ |
ಪೃಥಿವಿಭೂಷಿಪಾ ಆಪತ್ತು ಪಾರಿಪಾ ||
ಸುಖಕೆ ಶ್ರೇಷ್ಠವಾ ಸತ್ಪದಾಬ್ಜವಾ |
ಸುಕುಚದಲ್ಲಿಡೈ ಸುವ್ಯಥೇ ಸುಡೈ || ೧೩ ||

ಸುರತ ಹುಟ್ಟುವಾ ಶೋಕವಟ್ಟುವಾ |
ಸ್ಮರಿಪ ವಂಶವಾ ಸಂಧಿಸೊಪ್ಪುವಾ ||
ನರರ ರಾಗವನಟ್ಟಿ ಮರೆಸುವಾ |
ಅರಸ ನಿನ್ನ ಅಧರಾಂಕಿತ ಸುಧಾ || ೧೪ ||

ಹಗಲು ಚರಿಸುವಿ ಹೋಗಿಯಾಟವಿ |
ಯುಗಕೆ ವೆಗ್ಗಳವು ಒಂದು ತೃಟಿಯದು ||
ಮೊಗದ ಸಿರಿಗುರುಳ್ಮೆಚ್ಚಿ ನೋಡಲು |
ಮಗುಳೆ ಜಡದೊಳು ಮೋಹಿಪೆವೀಗಳು || ೧೫ |

|ಎಳೆಯರಿನಿಯರ ಇಷ್ಟರಾಪ್ತರಾ |
ಬಲವ ಮೀರುತ ಬಂದೆವಚ್ಚುತಾ ||
ಲಲಿತಗೀತದಾಲಾಪಮೋಹದಾ |
ಬಲೆರ ನೈಶಕೆ ಬಿಟ್ಟ ಕುಹಕವಾ || ೧೬ ||

ಮುಗುಳು ನಗೆಮೊಗ ಮೋಹನೋಟವು |
ಮುಗುಳಗಣೆಯನ ಮೀಟುವಾಘನಾ ||
ಮಿಗಿಲು ನಿಮ್ಮದೆ ಮಾಟ ಕಂಡೆದೆ |
ಬಿಗಿದು ಅಪ್ಪುವೆಂಬೆಸೆವ ಮೋಹವು || ೧೭ ||

ಆಕಳ ಕಾವರಾ ಮಂಗಳಾಹರಾ |
ಪ್ರಕಟ ನಿನ್ನದು ಪಾಪ ಪೋಪದು ||
ಸ್ವಕೀಯರಾರ್ತಿಹಾ ಸರ್ವರೋಗಹಾ |
ನಿಖಿಳರಾಸೆಯಾ ಪೂರೈಸಯ್ಯ ನೀ || ೧೮ ||

ಪ್ರಸನ್ನವೆಂಕಟಾ ಪಶುಪ್ರಪಾಲಕಾ |
ಆಸೆಯರ್ಗೀತವಾ ಆರಿತು ಮಾಧವಾ ||
ಪ್ರಸನ್ನವಾಗುವ ಆಪತ್ತು ಹರಿಸುವಾ |
ಶಶಿಮುಖಿಯರೊಳ್ ಸ್ನೇಹತಪ್ತರಾ || ೧೯ ||
********