Showing posts with label ನಿನ್ನ ಮಗನ ಲೀಲೆಯ ತಾಳಲಾರೆವೆ rangavittala. Show all posts
Showing posts with label ನಿನ್ನ ಮಗನ ಲೀಲೆಯ ತಾಳಲಾರೆವೆ rangavittala. Show all posts

Wednesday 11 December 2019

ನಿನ್ನ ಮಗನ ಲೀಲೆಯ ತಾಳಲಾರೆವೆ ankita rangavittala

ಕುರಂಜಿ ರಾಗ ಆದಿತಾಳ

ನಿನ್ನ ಮಗನ ಲೀಲೆಯ ತಾಳಲಾರೆವೆ ನಾವು
ತರಳನ ದುಡುಕು ಹೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿ ಅಮ್ಮ ||ಪ||

ಇದು ಚೆನ್ನಾಯಿತು ತಿಳಿದವನಲ್ಲವೆ
ನೀ ಕೇಳೆ ಯಶೋದೆ ||ಅ.ಪ||

ಬಾಲಕನೆಂದು ಲಾಲಿಸಿ ಕರೆದರೆ
ಮೂಲೆ ಮನೆಯೊಳಗೆ ಪೊಕ್ಕು
ಪಾಲು ಬೆಣ್ಣೆ ಮೊಸರೆಲ್ಲವ ಮೆದ್ದು
ಕೋಲಲಿ ನೀರೆ ಕೊಡವ ಒಡೆದನೇ
ಆಸಲ (?) ವರ್ಣನವ ದಿಟ್ಟ ನಿತ್ಯಾ ಇವನ ಹೋರಾಟ
ಹೆಬ್ಬಾಲೆಯರಲ್ಲಿ ನೋಟ ಬಹಳ ಬಗೆಯಲಿ
ಪಿಡಿದೇವೆಂದರೆ ಮೇಲಿಯಂಜಲುಗಳವೋಡಿದಾ (?)
ಅಮ್ಮ ಇದು ಚೆನ್ನಾಯಿತು ||೧||

ಮತ್ತೆ ಭಾಮಿನಿಯರೆಲ್ಲರು ಕೂಡಿ
ಮಡುವಿನಲ್ಲಿ ಜಲಕ್ರೀಡೆಯಾಡಿರಲು
ಚಿತ್ತಚೋರ ಸೀರೆಗಳನೆಲ್ಲವ-
ನೆತ್ತಿಕೊಂಡು ಮರನನೇರಿದನವ್ವಾ
ಬೆತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲ
ಈ ಯುಕ್ತಿಗಳೆ ಬಹುಬಲ್ಲ
ಹತ್ತಿಲಿ ಬಂದು ಕರವೆತ್ತಿ ಮುಗಿದರೆ
ವಸ್ತ್ರಗಳೆಲ್ಲವ ಕೊಡುವೆನೆಂದನೇ ಅಮ್ಮ ||೨||

ಸದ್ದು ಮಾಡದೆ ಸರುಹೊತ್ತಿನಲಿ ನಾವು(?)
ನಿದ್ದೆಗಣ್ಣಿನಲಿ ನಾವಿರಲು
ಮುದ್ದುಕೃಷ್ಣ ನಮ್ಮನೆಯವರಂತೆ
ಮುದದಿಂದ ಕೂಡಿದನವ್ವ
ಎದ್ದು ನೋಡಿದೆವಲ್ಲ ಆಹ ಏನೇ ನಮ್ಮವರಲ್ಲ
ಬುದ್ಧಿ ಮೋಸ ಬಂತಲ್ಲ
ಪೊದ್ದು ಸಲ್ಲಿಸಿದೀ ಜಾರ ನೀನೆಂದರೆ
ಪರಿಹಾಸ್ಯವ ಮಾಡಿದ ರಂಗವಿಠಲನ ಅಮ್ಮ ||೩||
********