RSS song .
ಹಿಂದುತ್ವದ ಅವತಾರ ಆಗಿದೆ ಇಲ್ಲಿ ಸಾಕಾರ
ಹಿಂದುಗಳನ್ನು ಸಂಘಟಿಸಿ ಸಜ್ಜನ ಶಕ್ತಿಯನೆಚ್ಚರಿಸಿ
ಅಧರ್ಮವನಳಿಸಿ ಧರ್ಮವನುಳಿಸಲು ಆಗಿದೆ ಸಾಕಾರ ||ಪ||
ಪ್ರಾಂತ ಭಾಷೆಗಳು ಹಲವಾರು ಜಾತಿಪಂಥಗಳು ನೂರಾರು
ವಿವಿಧತೆಯಲ್ಲಿನ ಏಕತೆ ಸಾರುವ ಹಿಂದುಗಳಾಗಿ ಬಂದಿಹರು
ಅಶಕ್ತ ಬಿಂದುಗಳು ಸೇರಿ ಮೆರೆಯುತಿರೆ ಶಕ್ತ ಸಿಂಧುವಿನ ರೂಪದಲಿ
ಹಿಂದುತ್ವದ ಹೆದ್ದೆರೆಯಲ್ಲಿ ||೧||
ಧರ್ಮವ ಬೆಳಗಿದ ಋಷಿ ಪರಂಪರೆ ರಾಷ್ಟ್ರ ರಕ್ಷಿಸಿದ ಸಂಘರ್ಷ
ಹಿಂದುತ್ವದ ಜಯಭೇರಿಯ ಮೊಳಗಿದೆ ವಿವೇಕಾದಿಗಳ ಆದರ್ಶ
ಜನಜನರೆದೆಯಲಿ ತುಂಬುತ ಸ್ಫೂರ್ತಿ ಧರ್ಮ ಜಾಗೃತಿಯು ಮೂಡುತಿದೆ
ನವಸೂರ್ಯೋದಯವಾಗುತಿದೆ ||೨||
ಕೃಷ್ಣನು ಪಾರ್ಥಗೆ ತುಂಬಿದ ಧೈರ್ಯ ವಿಶ್ವರೂಪ ದರ್ಶನದಿಂದ
ಆತ್ಮವಿಸ್ಮೃತಿಯ ಕಳೆದು ನಿಂತನು ನವೋತ್ಸಾಹದಲಿ ಛಲದಿಂದ
ಕೇಶವ ತೋರಿದ ಸಂಘ ಮಾರ್ಗದಲಿ ನಡೆಯುತ ಸಾಗಿಹ ಈ ದೃಶ್ಯ
ವಿರಾಟ ಪುರುಷಗೆ ಸಾದೃಶ್ಯ ||೩||
***
hiMdutvada avatAra Agide illi sAkAra
hiMdugaLannu saMGaTisi sajjana Saktiyaneccarisi
adharmavanaLisi dharmavanuLisalu Agide sAkAra ||pa||
prAMta BAShegaLu halavAru jAtipaMthagaLu nUrAru
vividhateyallina Ekate sAruva hiMdugaLAgi baMdiharu
aSakta biMdugaLu sEri mereyutire Sakta siMdhuvina rUpadali
hiMdutvada heddereyalli ||1||
dharmava beLagida RuShi paraMpare rAShTra rakShisida saMGarSha
hiMdutvada jayaBEriya moLagide vivEkAdigaLa AdarSa
janajanaredeyali tuMbuta sphUrti dharma jAgRutiyu mUDutide
navasUryOdayavAgutide ||2||
kRuShNanu pArthage tuMbida dhairya viSvarUpa darSanadiMda
AtmavismRutiya kaLedu niMtanu navOtsAhadali CaladiMda
kESava tOrida saMGa mArgadali naDeyuta sAgiha I dRuSya
virATa puruShage sAdRuSya ||3||
***