kruti by ಗುರುಗೋವಿಂದಠಲ (ಮೈಸೂರು)
ರಾಗ: ಮಧ್ಯಮಾವತಿ ತಾಳ: ಆದಿ
ಕ್ಷಮಾಸಮುದ್ರನೆ ನಮಾಮಿ ಗುರು
ನಿನ್ನ ಸಮಾನರ್ಯಾರಿನ್ನೂ ಪ
ರಮೇಶ ಪದದ್ವಯ ಕಮಲ ಪುಷ್ಪಕೆ
ಭ್ರಮರ ತವಪದ ನಮಿಸುವೇ ಅ.ಪ.
ತತ್ವ ಪ್ರದರ್ಶಕ ಶೃತ್ಯರ್ಥ ಬೋಧಕ
ಗೀತಾರ್ಥ ಸಂಗ್ರಹ ಕೃತೇ ನಮೋ
ಪ್ರತ್ಯರ್ಥಿ ಮತ್ತೇಭ ಪಂಚಾಸ್ಯ ನಿನ್ನಯ
ಭೃತ್ಯನ ಅಪಮೃತಿ ತಪ್ಪಿಸಿದೇ 1
ಅದ್ವೈತ ದುಸ್ಸಹವಾಸನ ನಿರಸನ
ಖದ್ಯೋತ ಸಮ ವ್ಯಾಪ್ತ ಪರಿಮಳಾ
ಸದ್ವೈಷ್ಣವ ಕುಮುದೇಂದು ವಿದ್ವಾಂಸನತ
ಪದದ್ವಂದ್ವಾ ವಿಮಲ ಕಮಲಾ 2
ಕುಷ್ಠಾದಿ ರೋಗಹರ ಕಷ್ಟ ನಿವಾರಣ
ಶ್ರೇಷ್ಠ ನಿಮ್ಮಯ ಸ್ಮರಣಾ
ನಿಷ್ಟೇಲಿ ಭಜಿಪರ ಇಷ್ಟಾರ್ಥ ಸಲಿಸುವ
ದುಷ್ಟ ವಾದಿಯ ದಮನಾ 3
ಪ್ರಹ್ಲಾದ ಬಾಲನೆ ವಿಮಲಾ ವಿಭೀಷಣ
ಬಾಹ್ಲೀಕ ಸೂನಾದೆ ಪ್ರತೀಪಗೆ
ವಿಹ್ವಲ ಹೃದಯರ ಚಂದ್ರಿಕೆಯಿಂದಲಿ
ಆಹ್ಲಾದ ಪಡಿಸಿದ ಸಲ್ಹಾದಾಗ್ರಜನೇ 4
ಗ್ರಂಥೀಯ ಹರಿಸುವ ಮಂತ್ರಾರ್ಥ ಬೋಧಿಸಿ
ಮಂತ್ರ ಸದನ ಗುರುವೇ
ಮಂತ್ರಾಗಮ್ಯ ಗುರುಗೋವಿಂದವಿಠಲನ
ಅಂತರದಿ ತೋರಿಸಿ ರಕ್ಷಿಸಯ್ಯಾ 5
***