Monday, 6 September 2021

ಕ್ಷಮಾ ಸಮುದ್ರನೆ ನಮಾಮಿ ಗುರು ನಿನ್ನ ಸಮಾನರ್ಯಾರಿನ್ನೂ ankita gurugovinda vittala

 kruti by ಗುರುಗೋವಿಂದಠಲ (ಮೈಸೂರು)


ರಾಗ: ಮಧ್ಯಮಾವತಿ ತಾಳ: ಆದಿ


ಕ್ಷಮಾಸಮುದ್ರನೆ ನಮಾಮಿ ಗುರು 

ನಿನ್ನ ಸಮಾನರ್ಯಾರಿನ್ನೂ


ರಮೇಶ ಪದದ್ವಯ ಕಮಲ ಪುಷ್ಪಕೆ 

ಭ್ರಮರ ತವಪದ ನಮಿಸುವೇ ಅ.ಪ.


ತತ್ವ ಪ್ರದರ್ಶಕ ಶೃತ್ಯರ್ಥ ಬೋಧಕ

ಗೀತಾರ್ಥ ಸಂಗ್ರಹ ಕೃತೇ ನಮೋ 

ಪ್ರತ್ಯರ್ಥಿ ಮತ್ತೇಭ ಪಂಚಾಸ್ಯ ನಿನ್ನಯ

ಭೃತ್ಯನ ಅಪಮೃತಿ ತಪ್ಪಿಸಿದೇ 1

ಅದ್ವೈತ ದುಸ್ಸಹವಾಸನ ನಿರಸನ

ಖದ್ಯೋತ ಸಮ ವ್ಯಾಪ್ತ ಪರಿಮಳಾ 

ಸದ್ವೈಷ್ಣವ ಕುಮುದೇಂದು ವಿದ್ವಾಂಸನತ 

ಪದದ್ವಂದ್ವಾ ವಿಮಲ ಕಮಲಾ 2

ಕುಷ್ಠಾದಿ ರೋಗಹರ ಕಷ್ಟ ನಿವಾರಣ

ಶ್ರೇಷ್ಠ ನಿಮ್ಮಯ ಸ್ಮರಣಾ 

ನಿಷ್ಟೇಲಿ ಭಜಿಪರ ಇಷ್ಟಾರ್ಥ ಸಲಿಸುವ 

ದುಷ್ಟ ವಾದಿಯ ದಮನಾ 3

ಪ್ರಹ್ಲಾದ ಬಾಲನೆ ವಿಮಲಾ ವಿಭೀಷಣ 

ಬಾಹ್ಲೀಕ ಸೂನಾದೆ ಪ್ರತೀಪಗೆ 

ವಿಹ್ವಲ ಹೃದಯರ ಚಂದ್ರಿಕೆಯಿಂದಲಿ

ಆಹ್ಲಾದ ಪಡಿಸಿದ ಸಲ್ಹಾದಾಗ್ರಜನೇ 4

ಗ್ರಂಥೀಯ ಹರಿಸುವ ಮಂತ್ರಾರ್ಥ ಬೋಧಿಸಿ

ಮಂತ್ರ ಸದನ ಗುರುವೇ 

ಮಂತ್ರಾಗಮ್ಯ ಗುರುಗೋವಿಂದವಿಠಲನ

ಅಂತರದಿ ತೋರಿಸಿ ರಕ್ಷಿಸಯ್ಯಾ 5

***


No comments:

Post a Comment