ಕಾಖಂಡಕಿ ಶ್ರೀ ಮಹಿಪತಿರಾಯರು
ಅಭ್ಯಾಸವಮಾಡಿ ಅಭ್ಯಂತ್ರದೊಳಗಿಹುದು P
ಕಣ್ಣು ಕಾಣುವದ್ಹಚ್ಚಿ ಚೆನ್ನಾಗಿ ಚಿತ್ಸ ್ವರೂಪವ ಭಿನ್ನವಿಲ್ಲದೆ ಭಾಸುವದು ಪುಣ್ಯಪ್ರಭೆಯು 1
ಕಿವಿಯು ಕೇಳುವದ್ಹಚ್ಚಿ ಸವಿಸವಿ ಸಾರಾಯದ ಶ್ರುತಿ ಆವಾಗ ನಿಮ್ಮೊಳಾಲಿಸಿ ಪವಿತ್ರ ಪ್ರಣವ 2
ಘ್ರಾಣ ಗ್ರಹಿಸುವದ್ಹಚ್ಚಿ ದೇಹದೊಳಾವಾಗ ಪೂರ್ಣ ಸೋಹ್ಯ ಸೂತ್ರವಿದು ಸೋಹ್ಯವೆಂಬುದಾ 3
ಜೀವಕೆ ಜೀವ್ಹಾಳಚ್ಚಿ ಸುವಿದ್ಯಸೇವೆ ಸೂತ್ರದ ಸರ್ವದಾ ಸವಿಸಾರವ ನೋಡಿ ದಿವ್ಯನಾಮದ 4
ಶಿವಸುಖವಿದುರಿಡುವಾಂಗೆ ಜೀವ ಜೀವದಾ 5
ಮನಸಿಗೆ ಮನಹಚ್ಚಿ ಮನೋನ್ಮನಮಾಡಿ ಘನಸುಖದೊಳು ಬೆರೆದಾಡಿ ಅನುಭವಿಸಿ ನೋಡಿ 6
ಗುರುವಿಗೆ ಗುರುವೆಂದರಿದು ನರದೇಹದ ಭಾವನೆಯ ಮರೆದು ಕರಕೊ ಮಹಿಪತಿ ಇರುಳ್ಹಗಲೆ ಸ್ಮರಿಸಿದಾಕ್ಷಣ 7
***