Showing posts with label ತಿರುನಲ್ವೇಲಿಲಿ ಮೆರೆವ ಶ್ರೀ ವಿಬುಧೇಂದ್ರರ lakumeesha vibudhendra teertha stutih. Show all posts
Showing posts with label ತಿರುನಲ್ವೇಲಿಲಿ ಮೆರೆವ ಶ್ರೀ ವಿಬುಧೇಂದ್ರರ lakumeesha vibudhendra teertha stutih. Show all posts

Saturday, 1 May 2021

ತಿರುನಲ್ವೇಲಿಲಿ ಮೆರೆವ ಶ್ರೀ ವಿಬುಧೇಂದ್ರರ ankita lakumeesha vibudhendra teertha stutih

ಶ್ರೀ ಶ್ಯಾಮಸುಂದರ ದಾಸರು 

vibudhendra teertha rayara mutt yati stutih

ರಾಗ : ದರ್ಬಾರಿಕಾನಡ  ತಾಳ : ಅಟ್ಟ 


ತಿರುನಲ್ವೇಲಿಲಿ ಮೆರೆವ -

ಶ್ರೀ ವಿಬುಧೇಂದ್ರರ ।

ಚರಣ ಭಜಿಸೋ 

ನಿರುತಾ ।। ಪಲ್ಲವಿ ।।


ಹರಿ ಕೊಡೆ ಸ್ವಪ್ನ ಅಲ್ಲಿ ।

ಶಿರಿ ಅಹೋಬಲ ತೀರ್ಥದಿ ।

ವರ  ಷೋಡಶ ಬಾಹು ।

ನರಹರಿಯಾ ತಂದ ।। ಅ ಪ ।।


ಶ್ರೀ ರಾಮಚಂದ್ರ ತೀರ್ಥರ ।

ವಾರಿಜ ಕರಜಾತ ।

ಧಾರುಣಿಯೊಳು ಖ್ಯಾತ ।

ಕೋರಿದವರಗರೆದಾತ ।

ನೀರಜಾಸನ ಪೂಜಿತ ।

ಶ್ರೀ ರಾಮಚಂದ್ರನ್ನ ।

ಆರಾಧಿಸಿ ಧ್ಯಾನಿಸಿ । 

ಕೀರುತಿ ಪಡೆದಂಥ ।। ಚರಣ ।।


ಉತ್ತಿ ಬಿತ್ತುವ ಕೃಷಿಲಿ ।

ನಿತ್ಯ ಉಪನೀತವ ।

ಎತ್ತಿ ಗೂಟಕೆ ಹಾಕುವ ।

ಜಿತ್ತಪ್ಪ ನಾಯಕನ ।

ಹತ್ತಿರ ಕರಿದೀಯೆ । ಸ್ತಂ ।

ಬೋದ್ಭವ ಜಲಜಕ್ಕೆ ।

ಮೆತ್ತಗುಣಿಸಿ  ಈತನ ।

ಜಿತಾಮಿತ್ರ ಯತಿಯಗೈದ ।। ಚರಣ ।।


ಆಕೇರಲಾ  ಆಸೇತು -

ಆಗಂಗ ಹಿಮಾಲಯಕೂ ।

ತಾಕಿ ದುರ್ವಾದಿಗಳ -

ಜಯಿಸಿದ ಜಯಪತ್ರವಾ ।

ಲಕುಮೀಶ ನರಹರಿಗೆ 

ನಿತ್ಯವೂ ಅರ್ಪಿಸಿ ।

ತಾ ಕರುಣೆಯ ಪಡೆದು 

ದ್ವೈತ ಧ್ವಜ ಹಾರಿಸಿದ ।। ಚರಣ ।।

****