ಶ್ರೀ ಶ್ಯಾಮಸುಂದರ ದಾಸರು
vibudhendra teertha rayara mutt yati stutih
ರಾಗ : ದರ್ಬಾರಿಕಾನಡ ತಾಳ : ಅಟ್ಟ
ತಿರುನಲ್ವೇಲಿಲಿ ಮೆರೆವ -
ಶ್ರೀ ವಿಬುಧೇಂದ್ರರ ।
ಚರಣ ಭಜಿಸೋ
ನಿರುತಾ ।। ಪಲ್ಲವಿ ।।
ಹರಿ ಕೊಡೆ ಸ್ವಪ್ನ ಅಲ್ಲಿ ।
ಶಿರಿ ಅಹೋಬಲ ತೀರ್ಥದಿ ।
ವರ ಷೋಡಶ ಬಾಹು ।
ನರಹರಿಯಾ ತಂದ ।। ಅ ಪ ।।
ಶ್ರೀ ರಾಮಚಂದ್ರ ತೀರ್ಥರ ।
ವಾರಿಜ ಕರಜಾತ ।
ಧಾರುಣಿಯೊಳು ಖ್ಯಾತ ।
ಕೋರಿದವರಗರೆದಾತ ।
ನೀರಜಾಸನ ಪೂಜಿತ ।
ಶ್ರೀ ರಾಮಚಂದ್ರನ್ನ ।
ಆರಾಧಿಸಿ ಧ್ಯಾನಿಸಿ ।
ಕೀರುತಿ ಪಡೆದಂಥ ।। ಚರಣ ।।
ಉತ್ತಿ ಬಿತ್ತುವ ಕೃಷಿಲಿ ।
ನಿತ್ಯ ಉಪನೀತವ ।
ಎತ್ತಿ ಗೂಟಕೆ ಹಾಕುವ ।
ಜಿತ್ತಪ್ಪ ನಾಯಕನ ।
ಹತ್ತಿರ ಕರಿದೀಯೆ । ಸ್ತಂ ।
ಬೋದ್ಭವ ಜಲಜಕ್ಕೆ ।
ಮೆತ್ತಗುಣಿಸಿ ಈತನ ।
ಜಿತಾಮಿತ್ರ ಯತಿಯಗೈದ ।। ಚರಣ ।।
ಆಕೇರಲಾ ಆಸೇತು -
ಆಗಂಗ ಹಿಮಾಲಯಕೂ ।
ತಾಕಿ ದುರ್ವಾದಿಗಳ -
ಜಯಿಸಿದ ಜಯಪತ್ರವಾ ।
ಲಕುಮೀಶ ನರಹರಿಗೆ
ನಿತ್ಯವೂ ಅರ್ಪಿಸಿ ।
ತಾ ಕರುಣೆಯ ಪಡೆದು
ದ್ವೈತ ಧ್ವಜ ಹಾರಿಸಿದ ।। ಚರಣ ।।
****
No comments:
Post a Comment