RAO COLLECTIONS SONGS refer remember refresh render DEVARANAMA
ಕರುಣಾಬ್ಧೆ ಶ್ರೀ ನಾರಸಿಂಹ ll ಪ ll
ಶರಣಾಗತಜನರ ಪೊರೆವೊ ಕೃಪಾಳು ll ಅ ಪ ll
ತರಳನ ಮಾತನು ಸಲಿಸುವುದಕೆ ಕಂಬ
ಬಿರಿದು ಅವತಾರಗೈದೆ ll 1 ll
ಕ್ಷೇಮವುಂಟಾದುದು ಶ್ರಮವೆಲ್ಲ ಪೋದುದು
ಭೂಮಿ ಭಾರವಿಳಿದುದು ll 2 ll
ಜಯ ಭಕ್ತವತ್ಸಲ ಜಯಜಗತ್ಪಾಲ
ಜಯ ಜಯ ಜಯ ಶ್ರೀ ಗುರುರಾಮವಿಟ್ಠಲ ll 3 ll
***