by govinda wodeyaru
ರಾಗ - ಶ್ರೀರಾಗ : ತಾಳ - ಆದಿತಾಳ
ಎಂದೆಂದೆನ್ನಾ ಮನದಿಂದಗಲದೀರು l
ನಂದ ನಂದನನೇ ಆನಂದ ಮೂರುತಿ ಕೃಷ್ಣಾ ll ಪ ll
ಬಹುಕಾಲದಿ ನಿನ್ನ ಶ್ರವಣವೆಂಬ ಪೊನ್ನೊಲೆಯಾ l
ಬಹುಮಾನದಿ ಎನ್ನ ಕಿವಿಯಲಿಟ್ಟೂ l
ಮಹಿತ ಮಂಗಳಸೂತ್ರವೆಂಬ ದಾಸ್ಯವನಿತ್ತು l
ಮಹದಾನಂದದಿ ಎನ್ನ ಕೊರಳ ಕಟ್ಟಿದೆಯಾಗಿ ll 1 ll
ಸುಲಲಿತ ಸೈರಾಣ ಮೊದಲಾದ ಭೂಷಣಿತ್ತೆ l
ಬೆಳೆಸಿದೆ ಭಕುತೀಲಿ ಸಖಿಯಳಿಂದಾ l
ಬೆಲೆಯಿಲ್ಲದಲೆ ಸುಜ್ಞಾನ ನಿಧಿಯೊಳಿಟ್ಟು l
ಜಲಜಾಕ್ಷ ನೀ ಎನ್ನ ವಲಿಸಿಯಾಳಿದೆಯಾಗಿ ll 2 ll
ಎಲ್ಲಿ ನೀ ನಿಲಸೀದಾರೆನಗೇನು ಭಯವಿಲ್ಲಾ l
ಬಲ್ಲೆನೊ ವಿಶ್ವ ವ್ಯಾಪಕನೆಂಬೋದು l
ಸಲ್ಲದು ಮುನಿಸೆನ್ನೊಳಗೆ ಗುರುಕೃಷ್ಣ ಇನಿ l
ತಲ್ಲಾದಿದ್ದಡೆ ಎನ್ನಾ ಶರಗಾ ಪಿಡಿದೆಳೆದೆಯಾಗಿ ll 3 ll
******