Monday, 1 March 2021

ಎಂದೆಂದೆನ್ನಾ ಮನದಿಂದಗಲದೀರು ankita gurukrishna

by govinda wodeyaru

ರಾಗ - ಶ್ರೀರಾಗ :  ತಾಳ - ಆದಿತಾಳ


ಎಂದೆಂದೆನ್ನಾ ಮನದಿಂದಗಲದೀರು l

ನಂದ ನಂದನನೇ ಆನಂದ ಮೂರುತಿ ಕೃಷ್ಣಾ ll ಪ ll


ಬಹುಕಾಲದಿ ನಿನ್ನ ಶ್ರವಣವೆಂಬ ಪೊನ್ನೊಲೆಯಾ l

ಬಹುಮಾನದಿ ಎನ್ನ ಕಿವಿಯಲಿಟ್ಟೂ l

ಮಹಿತ ಮಂಗಳಸೂತ್ರವೆಂಬ ದಾಸ್ಯವನಿತ್ತು l

ಮಹದಾನಂದದಿ ಎನ್ನ ಕೊರಳ ಕಟ್ಟಿದೆಯಾಗಿ ll 1 ll


ಸುಲಲಿತ ಸೈರಾಣ ಮೊದಲಾದ ಭೂಷಣಿತ್ತೆ l

ಬೆಳೆಸಿದೆ ಭಕುತೀಲಿ ಸಖಿಯಳಿಂದಾ l

ಬೆಲೆಯಿಲ್ಲದಲೆ ಸುಜ್ಞಾನ ನಿಧಿಯೊಳಿಟ್ಟು l

ಜಲಜಾಕ್ಷ ನೀ ಎನ್ನ ವಲಿಸಿಯಾಳಿದೆಯಾಗಿ ll 2 ll


ಎಲ್ಲಿ ನೀ ನಿಲಸೀದಾರೆನಗೇನು ಭಯವಿಲ್ಲಾ l

ಬಲ್ಲೆನೊ ವಿಶ್ವ ವ್ಯಾಪಕನೆಂಬೋದು l

ಸಲ್ಲದು ಮುನಿಸೆನ್ನೊಳಗೆ ಗುರುಕೃಷ್ಣ ಇನಿ l

ತಲ್ಲಾದಿದ್ದಡೆ ಎನ್ನಾ ಶರಗಾ ಪಿಡಿದೆಳೆದೆಯಾಗಿ ll 3 ll

******

 

No comments:

Post a Comment