(upto first para only)
ankita ಶ್ರೀಕರವಿಠಲ
ರಾಗ: ಜಂಜೂಟಿ ತಾಳ: ಆದಿ
ಶ್ರೀಸುಧೀಂದ್ರಜ ಪೊರೆಯೊ ಎನ್ನ
ದಾಶರಥಿಯಪ್ರಿಯ
ಭಾಸುರಚರಿತನೆ ದೈಶಿಕರೊಡೆಯ ಪ
ಒಂದು ಅರಿಯದ ಬಲು ಮಂದಮತಿಯು ನಾನು
ವಂದಿಸುವೆ ದ್ವಂದ್ವಚರಣ ಕರುಣಾಸಿಂಧುವೆ
ಒಂದು ದಿನವಾದರು ಬಂದು ಸಂದರುಶನವಿತ್ತು
ಕುಂದೆಣಿಸದೆ ಮಂತ್ರಮಂದಿರ ಕೈಪಿಡಿ ಚಂದಿರವದನ 1
ಗಳದೊಳು ನಳಿನತುಳಸಿಯಮಾಲೆಧರ
ತಿಲಕವನು ಫಣೆಯೊಳಿಟ್ಟ ಚೆಲುವಯತಿಯೆ
ಸುಲಲಿತ ದಂಡಕಮಂಡಲವನ್ನೆ ಪಿಡಿಯುತ
ಸಲೆತುಂಗಾತಟದಲ್ಲಿದ್ದು ಸಲಿಸಿದ ಸೇವೆಯಕೊಳುತ 2
ಶ್ರೀಕರವಿಠಲನಿಂದ ವರಪಡೆದು ಭಕ್ತವೃಂದವನ್ನು ಪಾಲಿಸುತ್ತ
ಚೆಂದದಿದಲಿ ವೃಂದಾವನದೊಳುನಿಂದು
ವಂಧ್ಯಾಂಧಕರಿಗೆ ಸುಕಂದರಕ್ಷಿಗಳನಿತ್ತು
ಕುಂದದೆ ಪೊರೆಯುವ ಬಂಧುರಮಹಿಮ 3
***