ರಾಗ : ಉದಯರಾಗ
Audio by Mrs. Nandini Sripad
ಶ್ರೀ ವಿಜಯದಾಸರ ಕೃತಿ
19ನೇ ಕಕ್ಷದಲ್ಲಿಯ ಮುನಿಗಳ ಪ್ರಮೇಯ ತಾರತಮ್ಯ ಪದ
ಮುನಿಜನರ ನೆನಿಸಿ ಜನರೂ ॥ ಪ ॥
ಮುನಿಜನರ ನೆನಿಸಿ ಬಿಡದನುದಿನದಲಿ ನಿಮ್ಮ ।
ಮನ ಮಲಿನ ಪೋಗಿ ಸಜ್ಜನ ಸಂಗವಾಗುವದು ।
ಅನುಮಾನವಿಲ್ಲ ಗುಣಗಣ ವನಧಿ ಹರಿ ವೊಲಿದು ।
ಘನವಾಗಿ ಪಾಲಿಸುವನು ॥ ಅ ಪ ॥
ಮಿತ್ರ ಮಿತ್ರಾಯು ವಿಚಿತ್ರ ಭಾರ್ಗವ ವಿಶ್ವಾ ।
ಮಿತ್ರ ಮೈತ್ರಾ ಮೈತ್ರ ವಾರುಣಿ ಭೃಗು ವೀತಿ ।
ಹೋತ್ರ ಕಪಿ ಗಾರ್ಗ್ಯ ಗಾಲವ ಗರ್ಗ ಗಾರ್ಚಮಾ ।
ಅತ್ರಿ ಅತಿ ಅಷ್ಟವಕ್ರ ॥
ಪತ್ರ ಫಲಾಶ ವಟು ಶ್ಯಾಂಡಿಲ್ಯ ಶಕಟ ಸು - ।
ನೇತ್ರ ಸುಮಾಂಗಲ್ಯ ಸಂಕೃತಿ ಭಾರದ್ವಾಜ ।
ಗೋತ್ರ ಗೌರಿವೀತ ಹವ್ಯ ಕಪಿ ಶಂಖ ಕಟ ।
ಮೈತ್ರಾವರುಣ ವಾಧುಳಾ ॥ 1 ॥
ಉಪಮನ್ಯು ಶಂಕು ಉದ್ದಾಲಕಾ ಕೌಂಡಿಣ್ಯ ।
ಅಪುನವಾನ ಅತಿಥಿ ಪಾಂತು ಚಾವನ ಚವನ ।
ಉಪಮಿಥ್ಯ ಕಪಿಲ ಕಾಶ್ಯಪ ಕಾಣ್ವ ಹರಿತ ಕ - ।
ಶ್ಯಪ ಪೂತಿಮಾಷ ರೈಭಾ ॥
ವಿಪುಳ ಜಮದಗ್ನಿ ವಾಲ್ಮೀಕಿ ರೇಭ ಜಾಬಾಲಿ ।
ಸ್ವಪನ ಸಾತ್ಯಕಿಯು ಸಾಮ್ಯಾಳ ದೇವರತತಿ ।
ತಪ ದೈವಲ ಸಿತ ಗೌತುಮ ಭದ್ರ ಸ್ವಾತಂತ್ರ ।
ಕಪಿ ಕುತ್ಸ್ನ ಪೌರ ಕುತ್ಸಾ ॥ 2 ॥
ಮುನಿ ಮಾದ್ರ ಮಶಣ ಶರ್ಮ ಬಾದರಾಯಣ ।
ಕನಕ ಕಾತ್ಯಾಯನ ಮಾರ್ಕಾಂಡ್ಯ ಮಾಂಡವ್ಯ ।
ಶುನಕ ಶೌನಕ ರೋಮಹರ್ಷಣ ಸೌಭರಿ ।
ತೃಣಬಿಂದು ಬಾಷ್ಕಾಳಾಖ್ಯಾ ॥
ಪನಸ ಅಘಮರ್ಷಣ ಪ್ರಮಥ ಪ್ರಾಗಾಧ ಜೀ - ।
ವನ ಯಾಜ್ಞವಲ್ಕ್ಯ ಜೀವಂತಿ ಮಾತಂಗ ಶೋ - ।
ಭನ ಸಕಕೃತಿ ಭಾರ್ಗವ ಸುರವತ್ಸ ಚಂ - ।
ದನ ಧೌಮ್ಯ ಆರ್ಯ ರುಚಿರಾ ॥ 3 ॥
ವಾಸಿಷ್ಠ ಶ್ರೀವತ್ಸ ಲೋಹಿತಾಷ್ಟಕ ಶರ್ಮ ।
ವಾಸುಳೆ ಋಷಿ ಶರಣ ಕರ್ದಮ ಮರೀಚಿ ಪಾ -।
ರಾಶರ ಪಲ್ಲಾದ್ರಿಧರ ಶಕ್ತಿ ವೈರೋಹಿತ್ಯ ।
ಭೇಷಿಜಾ ವಾಯು ಲಿಕಿಯೂ ॥
ಭೂಷಣಾ ಬಾರ್ಹಸ್ಪತ್ಯ ದಾಲ್ಭ್ಯ ಸುಯಜ್ಞಾಜ್ಞಿ ।
ವೇಶ್ಯಮುಖ ಸಪರಿಧಿ ಸಾಲಂಕಾಯನಾ ಧರ್ಮ ।
ದೈಸಿಕಾ ದೇವರಾತ ವತ್ಸರಾ ಔರ್ವ ನಾ - ।
ನಾಶಯ ದೇವಶ್ರವತಾ ॥ 4 ॥
ಗಿವಿಷ್ಠರಾ ವಾಮ ವಾಮರಿತ್ಯ ಕಾಲುಗ್ರ ।
ಶ್ರವ ಪೂರ್ಣವಾಹಕ ಕೃತು ಅಂಗಿರಸಾಂಗಿರಾ ।
ಪವನ ಪ್ರಾಚಿನಾ ಯಜ್ಞಾರಿಷ್ಟ ಶಠನಾ ಪಾ - ।
ಲವ ಶಮನ ಋಷಿಶೃಂಗ ॥
ಕವಿ ವೇದಶಾಲ ವಿಶಾಲ ಕೌಸಿಕ ಶುಚಿ ।
ಭುವನ ಊರ್ಜಯನ ಮಹಾಋಷಿ ಬಹುಧ ಸಂ - ।
ಭವಸ್ತಂಭ ಕಿರಾರಿ ಕಪಿಸೇನ ಶಾಂಡಿಲ್ಯ ।
ಪವನದಮ ಬೀಜವಾಪಿ ॥ 5 ॥
ಉಲಿಖಲ್ಲು ಧನಂಜಯ ವಾಲಿಖಿಲ್ಲ್ಯಾ ಮಾಯ ।
ಕಲಿಕಿ ಶೃಂಗಿ ಮಧು ಚಂದವಿತನು ಬಹು ।
ಬಲ ಧೂಮ್ರ ಜಠರ ಊರ್ವಾಸ ಐಕ್ಯಾಯನ ।
ತಿಲುಕ ವಿಭಾಂಡ ಶರಭಾ ॥
ಪುಲಸ್ತ್ಯ ದಧೀಚಿ ಕಥಾಸೂನು ಸೇವಾಸ್ಯ ಮೌ - ।
ದ್ಗಲ ವಿಷ್ಣು ತ್ರಿಧಕುಕ್ಷಿ ಕುಕ್ಷಮ ನಂತತ್ತು ।
ಪುಲಹ ಹವಿಧಾನ ಉತ್ತಂಕ ಉತ್ತುಮ ಕಚರ ।
ಬಲವೀರ್ಯ ಬಬ್ರಮನು ॥ 6 ॥
ಸುತಪ ಅಪವರ್ಗ ಹಿರಣ್ಯನಾಭಾ ಅ - ।
ದ್ಭುತ ಅಜಾಮಿಢಾ ಪರ್ವತ ಶ್ವೇತಕೇತ ಮಹ ।
ಧೃತಿ ಶಕ್ತಿ ವೈಶಂಪಾಯನ ಪೈಲ ಜಯ ।
ಸತ್ಯವೃತ ಶೃತಿ ಧೃತಿ ಆಯಕಾ ॥
ಶೃತಿಕೀರ್ತಿ ಸುಪ್ರಭಾ ವತ್ಸ ಮೃಕಾಂಡ ಸು - ।
ಮತಿ ಕ್ರೋಢ ಕೊಲ ಗೋಬಲಾ ಮಾತೃಕಾನಂದ ।
ದ್ಯುತಿ ತಪ ವಿದ್ವಾಹ ದರ್ಭಾ ಜಾನ್ಹವ ಸೀಲ ।
ಕಥನ ಸರ್ವಸ್ಥಂಬವಾ ॥ 7 ॥
ನೈಧ್ರುವಾ ದೀರ್ಘತಮ ಜಮದಗ್ನಿ ಕಾರುಣಿ ।
ಸದ್ಮುನಿ ಕಾಂಡಮಣಿ ಮಾಂಡವ್ಯ ವಾಚಸಕ ।
ಶುದ್ಧ ಸಂವರ್ತ ಸಂತತ ಕಾಮ ಸಂಹತಿ ।
ಸಿದ್ಧಿ ಸನಕ ಸನಂದನಾ ॥
ವಿದ್ಯಾಂಗ ಹವ್ಯ ರೋಹಿತ ಶರ್ಮ ಸೂಕರ್ಮ ।
ವುದ್ಧಾಳ ವುಚಿಥ್ಯ ಹರಿಮೇಧ ಮೇಧ ಪ್ರ - ।
ಸಿದ್ಧ ಮಯೂರ ಶುಕ ಕಪಿಲ ಕಾಪಿಲ್ಯ ಗುಣ ।
ಬುದ್ಧಿ ಸುಮೇಧ ಪೇರ್ಮಿ ॥ 8 ॥
ಪಂಚ ಪಂಚಾಸಪ್ತ ಅಷ್ಟ ಕಾಲದಲಿ ಪ್ರಾ - ।
ಪಂಚದೊಳು ತೊಡಕದಲೆ ಬುದ್ಧಿ ಚಿತ್ತದೊಳಿಟ್ಟು ।
ಅಂಚಿಗಂಚಿಗೆ ಬಹು ಮುನಿಗಳೊಳಗಿದ್ದವರ ।
ಕೊಂಚ ಮುನಿಗಳ ಪೇಳಿದೆ ॥
ವಂಚನೆಯಿಲ್ಲದೆ ಸ್ಮರಿಸಿ ಮಧ್ವಮತ ಪೊಂದಿ ।
ಸಂಚಿತಾಗಮ ಕಳೆವ ಸರ್ವಸುಖವೀವ ವಿ - ।
ರಂಚಿಪಿತ ವಿಜಯವಿಠ್ಠಲರೇಯ ಇಂದು ರವಿ ।
ಮಿಂಚಿನಂದದಿ ಪೊಳೆವನೂ ॥ 9 ॥
**********