Showing posts with label ಮಂಗಳಂ ಶ್ರೀಗುರುವರ್ಯರಿಗೆ ಮಂಗಳಾಂಗರಿಗೆ ankita gopalakrishna vittala. Show all posts
Showing posts with label ಮಂಗಳಂ ಶ್ರೀಗುರುವರ್ಯರಿಗೆ ಮಂಗಳಾಂಗರಿಗೆ ankita gopalakrishna vittala. Show all posts

Monday, 2 August 2021

ಮಂಗಳಂ ಶ್ರೀಗುರುವರ್ಯರಿಗೆ ಮಂಗಳಾಂಗರಿಗೆ ankita gopalakrishna vittala

ಮಂಗಳಂ ಶ್ರೀ ಗುರುವರ್ಯರಿಗೆ | ಮಂಗಳಾಂಗರಿಗೆ

ಮಂಗಳಂ ಶ್ರೀ ಗುರುವರ್ಯರಿಗೆ ಪ.


ರಂಗನಾಥನ ಪದ ಸರೋಜಕೆ

ಭೃಂಗರೆನಿಸಿ ಮೆರೆಯುವರಿಗೆ ಅ.ಪ.


ತಂದೆ ಮುದ್ದುಮೋಹನರೆಂ

ತೆಂದು ಮೆರೆಯುತ

ಮಂದಮತಿಯ ಬಿಡಿಸಿ ಎನ್ನ

ತಂದೆಯಂತೆ ಪೊರೆಯುವರಿಗೆ 1

ನಾಗಶಯನ ಹರಿಯ ಭಜಿಪ

ಭೋಗಿವರರಿಗೆ

ಭಾಗವತರ ಸಂಘದೊಳಗೆ

ಯೋಗಿಯಾಗಿ ಚರಿಸುವರಿಗೆ 2

ಪರಮಪ್ರಿಯರಾಗಿ ಹರಿಗೆ

ಪರಮಪ್ರಿಯರೆಂದು

ಕರೆಸಿಕೊಳುತ ನರಹರಿಯ

ಚರಣ ಮನದಿ ಸ್ಮರಿಸುವರಿಗೆ 3

ಕರ್ಮಗಳನೆ ಕಡಿದು e್ಞÁನ

ಧರ್ಮಮಾರ್ಗದಿ

ಧರ್ಮತತ್ವ ಬೋಧಿಸಿ ಅ-

ಧರ್ಮಗಳನೆ ಬಿಡಿಸುವರಿಗೆ4

ಗೋಪಾಲಕೃಷ್ಣವಿಠ್ಠಲನ

ರೂಪ ತೋರುತ

ಪಾಪಗಳನೆ ತರಿದು ಭವ

ಕೂಪದಿಂದ ಪೊರೆಯುವರಿಗೆ 5

****