Showing posts with label ಶ್ರೀನಿವಾಸ ಕಲ್ಯಾಣ sri shreenivasa kalyana. Show all posts
Showing posts with label ಶ್ರೀನಿವಾಸ ಕಲ್ಯಾಣ sri shreenivasa kalyana. Show all posts

Saturday 28 December 2019

ಶ್ರೀನಿವಾಸ ಕಲ್ಯಾಣ sri shreenivasa kalyana



ಶ್ರೀನಿವಾಸ ಕಲ್ಯಾಣ
ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।।

ಗಂಗಾ ತೀರದಿ ಋಷಿಗಳು । ಅಂದು ಯಾಗವ ಮಾಡ್ಡರು
ಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು

ಅರಿತು ಬರಬೇಕು ಎಂದು । ಆ ಮುನಿಯು ತೆರಳಿದ
-ಭೃಗುಮುನೀಯು ತೆರಳಿದ
ನಂದಗೋಪನ ಮಗನ ಕಂದನ । ಮಂದಿರಕಾಗ ಬಂದನು

ವೇದಗಳನೆ ಓದುತಾ । ಹರಿಯನೂ ಕೊಂಡಾಡುತಾ
ಇರುವ ಬೊಮ್ಮನ ನೋಡಿದ । ಕೈಲಾಸಕ್ಕೆ ಬಂದನು

ಶಂಭುಕಂಠನು ಪಾರ್ವತೀಯೂ । ಕಲೆತಿರುವುದ ಕಂಡನು
ಸೃಷ್ಟಿಯೊಳಗೆ ನಿನ್ನ ಲಿಂಗ । ಶ್ರೇಷ್ಠವಾಗಲೆಂದನು

ವೈಕುಂಠಕ್ಕೆ ಬಂದನು । ವಾರಿಜಾಕ್ಷನ ಕಂಡನು
ಕೆಟ್ಟ ಕೋಪದಿಂದ ಒದ್ದರೆ । ಎಷ್ಟು ನೊಂದಿತೆಂದನು

ತಟ್ಟನೆ ಬಿಸಿನೀರಿನಿಂದ । ನೆಟ್ಟಗೆ ಪಾದ ತೊಳೆದನು
ಬಂದ ಕಾರ್ಯ ಆಯಿತೆಂದು । ಅಂದು ಮುನಿಯು ತೆರಳಿದ
ಬಂದು ನಿಂದು ಸಭೆಯೊಳಗೆ । ಇಂದಿರೇಶನ ಹೊಗಳಿದ

ಪತಿಯ ಕೂಡೆ ಕಲಹ ಮಾಡಿ । ಕೊಲ್ಹಾಪುರಕೆ ಹೋದಳು
ಸತಿಯು ಪೋಗೆ ಪತಿಯು ಹೊರಟು । ಗಿರಿಗೆ ಬಂದು ಸೇರಿದ

ಹುತ್ತದಲ್ಲೆ ಹತ್ತು ಸಾವಿರ ವರುಷ । ಗುಪ್ತವಾಗಿ ಇದ್ದನು
ಬ್ರಹ್ಮ ಧೇನುವಾದನು । ರುದ್ರ ವತ್ಸನಾದನು

ಧೇನು ಮುಂದೆ ಮಾಡಿಕೊಂಡು । ಗೋಪಿ ಹಿಂದೆ ಬಂದಳು
ಕೋಟಿ ಹೊನ್ನು ಬಾಳುವೋದು । ಕೊಡದ ಹಾಲು ಕರೆವುದು

ಪ್ರೀತಿಯಿಂದಲಿ ತನ್ನ ಮನೆಗೆ । ತಂದುಕೊಂಡನು ಚೋಳನು
ಒಂದು ದಿವಸ ಕಂದಗೆ ಹಾಲು । ಚೆಂದದಿಂದಲಿ ಕೊಡಲಿಲ್ಲ.

ಅಂದು ರಾಯನ ಮಡದಿ ಕೋಪಿಸಿ । ಬಂದು ಗೋಪನ ಹೊಡೆದಳು
ಧೇನು ಮುಂದೆ ಮಾಡಿಕೊಂಡು । ಗೋಪ ಹಿಂದೆ ನಡೆದನು

ಕಾಮಧೇನು ಕರೆದ ಹಾಲು । ಹರಿಯ ಶಿರಕೆ ಬಿದ್ದಿತು
ಇಷ್ಟು ಕಷ್ಟ ಬಂದಿತೆಂದು । ಪೆಟ್ಟು ಬಡಿಯೆ ಹೋದನು

ಕೃಷ್ಣ ತನ್ನ ಮನದಲ್ಯೋಚಿಸಿ । ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ । ಏಕವಾಗಿ ಹರಿಯಿತು

ರಕ್ತವನ್ನು ನೋಡಿ ಗೋಪ । ಮತ್ತೆ ಸ್ವರ್ಗಕ್ಕೇರಿದ
ಕಷ್ಟವನ್ನು ನೋಡಿ ಗೋವು । ಅಷ್ಟು ಬಂದ್-ಹೇಳಿತು

ತಟ್ಟನೆ ರಾಯ ಎದ್ದು ಗಿರಿಗೆ । ಬಂದು ಬೇಗ ಸೇರಿದ
ಏನು ಕಷ್ಟ ಇಲ್ಲಿ ಹೀಗೆ । ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟವಾಗೆ । ಭ್ರಷ್ಟಪಿಶಾಚಿಯಾಗೆಂದ
ಪೆಟ್ಟು ವೇದನೆ ತಾಳಲಾರದೆ । ಬೃಹಸ್ಪತೀಯ ಕರೆಸಿದ

ಅರುಣ ಉದಯದಲ್ಲೆದ್ದು । ಔಷಧಕ್ಕೆ ಪೋದನು
ಕ್ರೋಡರೂಪಿಯ ಕಂಡನು । ಕೂಡಿ ಮಾತನಾಡಿದನು

ಇರುವುದಕ್ಕೆ ಸ್ಥಳವು ಎನಗೆ । ಏರ್ಪಾಡಾಗಬೇಕೆಂದ
ನೂರು ಪಾದ ಭೂಮಿ ಕೊಟ್ಟರೆ । ಮೊದಲು ಪೂಜೆ ನಿಮಗೆಂದ

ಪಾಕ ಪಕ್ವ ಮಾಡುವುದಕ್ಕೆ । ಆಕೆ ಬಕುಳೆ ಬಂದಳು
ಭಾನುಕೋಟಿತೇಜನೀಗ । ಬೇಟೆಯಾಡ ಹೊರಟನು

ಮಂಡೆ ಬಾಚಿ ದೊಂಡೆ ಹಾಕಿ । ದುಂಡುಮಲ್ಲಿಗೆ ಮುಡಿದನು
ಹಾರ ಪದಕ ಕೊರಳಲ್ಹಾಕಿ । ಫಣೆಗೆ ತಿಲಕವಿಟ್ಟನು

ಅಂಗುಲಿಗೆ ಉಂಗುರ । ರಂಗಶ್ವಂಗಾರವಾದವು
ಪಟ್ಟೆನುಟ್ಟು ಕಚ್ಚೆ ಕಟ್ಟಿ । ಪೀತಾಂಬರವ ಹೊದ್ದನು

ಢಾಳು ಕತ್ತಿ ಉಡಿಯಲ್ ಸಿಕ್ಕಿ । ಜೋಡು ಕಾಲಲ್ಲಿ ಮೆಟ್ಟಿದ
ಕರದಿ ವೀಳ್ಯವನ್ನೆ ಪಿಡಿದು । ಕನ್ನಡಿಯ ನೋಡಿದ

ಕನಕಭೂಷಣವಾದ ತೊಡಿಗೆ । ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ । ಕಮಲನಾಭ ಏರಿದ

ಕರಿಯ ಹಿಂದೆ ಹರಿಯು ಬರಲು । ಕಾಂತೆರೆಲ್ಲ ಕಂಡರು
ಯಾರು ಇಲ್ಲಿ ಬರುವರೆಂದು । ದೂರ ಪೋಗಿರೆಂದರು

ನಾರಿಯರಿರುವ ಸ್ಥಳಕೆ । ಯಾವ ಪುರುಷ ಬರುವನು
ಎಷ್ಟು ಹೇಳೆ ಕೇಳ ಕೃಷ್ಣ । ಕುದುರೆ ಮುಂದೆ ಬಿಟ್ಟನು

ಅಷ್ಟು ಮಂದೀರೆಲ್ಲ ಸೇರಿ । ಪೆಟ್ಟುಗಳನು ಹೊಡೆದರು
ಕಲ್ಲುಮಳೆಯ ಕರೆದರಾಗ । ಕುದುರೆ ಕೆಳಗೆ ಬಿದ್ದಿತು

ಕೇಶ ಬಿಚ್ಚಿ ವಾಸುದೇವ । ಶೇಷಗಿರಿಗೆ ಬಂದನು
ಪರಮಾನ್ನ ಮಾಡಿದ್ದೇನೆ । ಉಣ್ಣು ಬೇಗ ಎಂದಳು

ಅಮ್ಮ ಎನಗೆ ಅನ್ನ ಬೇಡ । ಎನ್ನ ಮಗನೆ ವೈರಿಯೇ
ಕಣ್ಣಿಲ್ಲಾದ ದೈವ ಅವಳ । ನಿರ್ಮಾಣವ ಮಾಡಿದ

ಯಾವ ದೇಶ ಯಾವೋಳಾಕೆ । ಎನಗೆ ಪೇಳು ಎಂದಳು
ನಾರಾಯಣನ ಪುರಕೆ ಪೋಗಿ । ರಾಮಕೃಷ್ಣರ ಪೂಜಿಸಿ

ಕುಂಜಮಣಿಯ ಕೊರಳಲ್ಹಾಕಿ । ಕೂಸಿನ್ ಕೊಂಕಳಲೆತ್ತಿದಾ
ಧರಣಿದೇವಿಗೆ ಕಣಿಯ ಹೇಳಿ । ಗಿರಿಗೆ ಬಂದು ಸೇರಿದ

ಕಾಂತೆರೆಲ್ಲ ಕೂಡಿಕೊಂಡು । ಆಗ ಬಕುಳೆ ಬಂದಳು
ಬನ್ನಿರೆಮ್ಮ ಸದನಕೆನುತ । ಬಹಳ ಮಾತನಾಡಿದರು

ತಂದೆತಾಯಿ ಬಂಧುಬಳಗ । ಹೊನ್ನು ಹಣ ಉಂಟೆಂದರು
ಇಷ್ಟು ಪರಿಯಲ್ಲಿದ್ದವಗೆ । ಕನ್ಯೆ ಯಾಕೆ ದೊರೆಕಲಿಲ್ಲ

ದೊಡ್ಡವಳಿಗೆ ಮಕ್ಕಳಿಲ್ಲ । ಮತ್ತೆ ಮದುವೆ ಮಾಡ್ವೆವು
ಬೃಹಸ್ಪತೀಯ ಕರೆಸಿದ । ಲಗ್ನಪತ್ರಿಕೆ ಬರೆಸಿದ (ಕಳುಹಿದ)

ಶುಕಾಚಾರ್ಯರ ಕರೆಸಿದ |ಮದುವೆ ಓಲೆ ಬರೆಸಿದ

ವಲ್ಲಭೆಯ ಕರೆವುದಕ್ಕೆ । ಕೊಲ್ಹಾಪುರಕೆ ಪೋದರು
ಗರುಡನ್ ಹೆಗಲನೇರಿಕೊಂಡು । ಬೇಗ ಹೊರಟುಬಂದರು

ಅಷ್ಟವರ್ಗವನ್ನು ಮಾಡಿ । ಇಷ್ಟದೇವರ ಪೂಜಿಸಿ
ಲಕ್ಷ್ಮೀಸಹಿತ ಆಕಾಶರಾಜನ । ಪಟ್ಟಣಕ್ಕೆ ಬಂದರು

ಕನಕಭೂಷಣವಾದ ತೊಡಿಗೆ । ಕಮಲನಾಥ ತೊಟ್ಟನು
ಕನಕಭೂಷಣವಾದ ಮಂಟಪ । ಕಮಲನಾಭ ಏರಿದ

ಕಮಲನಾಭಗೆ ಕಾಂತೆಮಣಿಯ । ಕನ್ಯದಾನವ ಮಾಡಿದ
ಕಮಲನಾಭ ಕಾಂತೆ ಕೈಗೆ । ಕಂಕಣವನ್ನೆ ಕಟ್ಟಿದ
ಶ್ರೀನಿವಾಸ ಪದ್ಮಾವತಿಗೆ । ಮಾಂಗಲ್ಯವಕಟ್ಟಿದ

ಶ್ರೀನಿವಾಸನ ಮದುವೆ ನೋಡೆ । ಸ್ಟೀಯರೆಲ್ಲರು ಬನ್ನಿರೇ
ಪದ್ಮಾವತಿಯ ಮದುವೆ ನೋಡೆ । ಮುದ್ದು ಬಾಲೆಯರ್ ಬನ್ನಿರೇ
ಶಂಕೆಯಿಲ್ಲದೆ ಹಣವ ಸುರಿದು । ವೆಂಕಟೇಶನ ಕಳುಹಿದ

ಲಕ್ಷ ತಪ್ಪು ಎನ್ನಲುಂಟು । ಪಕ್ಷಿವಾಹನ ಸಲಹೆನ್ನ
ಕೋಟಿ ತಪ್ಪು ಎನ್ನಲುಂಟು ಕುಸುಮನಾಭ ಸಲಹೆನ್ನ
ಶಂಕೆಯಿಲ್ಲದೆ ವರವ ಕೊಡುವ ವೆಂಕಟೇಶ ಸಲಹೆನ್ನ
ಭಕ್ತಿಯಿಂದಲಿ ಹೇಳ್ಕೇಳ್ದವರಿಗೆ । ಮುಕ್ತಿ ಕೊಡುವ ಹಯವದನ

ಜಯ ಜಯ ಶ್ರೀನಿವಾಸನಿಗೆ । ಜಯ ಜಯ ಪದ್ಮಾವತಿಗೆ
ಒಲಿದಂತಹ ಶ್ರೀಹರಿಗೆ । ನಿತ್ಯ ಶುಭಮಂಗಳ
ಶೇಷಾದ್ರಿಗಿರಿವಾಸ । ಶ್ರೀದೇವಿ ಅರಸಗೆ
ಕಲ್ಯಾಣಮೂರುತಿಗೆ । ನಿತ್ಯಜಯಮಂಗಳ||
***********