Showing posts with label ಚಂಚಲಿಸದಿರು ನೀನು ಚತುರನಾಗು prasannavenkata. Show all posts
Showing posts with label ಚಂಚಲಿಸದಿರು ನೀನು ಚತುರನಾಗು prasannavenkata. Show all posts

Monday, 11 November 2019

ಚಂಚಲಿಸದಿರು ನೀನು ಚತುರನಾಗು ankita prasannavenkata

by ಪ್ರಸನ್ನವೆಂಕಟದಾಸರು
ಚಂಚಲಿಸದಿರು ನೀನು ಚತುರನಾಗು ವಂಚಿಸದೆ ಸಕಲವೊಪ್ಪಿಸು ಹರಿಗೆ ಮನವೆ ಪ.

ಆರು ನಿನ್ನವರೆಂಬೆ ಅವರಗಲಿದರು ಕಡೆಗೆಭೂರಿಸಂಚಿತ ಸಂಪದೆರವಾಯಿತುಜಾರುತಿವೆ ಕ್ಷಣಲವಗಳೀಗಾಗೆ ತಿಳಿಯದುನಾರಸಿಂಹನ ನಂಬು ನಿಷ್ಠೆಯಲಿ ಮನವೆ 1

ಅಲ್ಪಸುಖಕಾಗಿ ನೀ ಅನೇಕ ಸುಖ ಮರೆವರೆಕಲ್ಪಕಲ್ಪಕೆ ನಿರಯವುಣಲಿಬಹುದೆಅಲ್ಪರುಪದೇಶದಲಿ ಭ್ರಾಂತನಾಗದೆಶೇಷತಲ್ಪನ್ನ ಮರೆಹೋಗು ತಡೆಯದಲೆ ಮನವೆ 2

ನಿನ್ನಿಂದಭವಬಂಧನವು ಮೋಚನವುನೋಡುನಿನ್ನಿಂದ ಪ್ರಸನ್ವೆಂಕಟೇಶನೊಲುಮೆಇನ್ನೆನ್ನ ದಣಿಸದಿರು ಇದರಿಂದ ಮೀರಿದರೆಘನ್ನಗುರು ಮಧ್ವೇಶನಾಣೆ ನಿನಗೆ 3
********