Showing posts with label ಶರಣರ ಪರಿಪಾಲಾ ಶ್ರೀಲೋಲಾ gopalakrishna vittala. Show all posts
Showing posts with label ಶರಣರ ಪರಿಪಾಲಾ ಶ್ರೀಲೋಲಾ gopalakrishna vittala. Show all posts

Monday, 2 August 2021

ಶರಣರ ಪರಿಪಾಲಾ ಶ್ರೀಲೋಲಾ ankita gopalakrishna vittala

ಶರಣರ ಪರಿಪಾಲಾ ಶ್ರೀಲೋಲಾ

ಪರಮ ಸುಂದರ ಬಾಲಾ ಪ.


ರುಕ್ಮಿಣಿ ರಮಣಾ ರಕ್ಕಸ ಹರಣಾ

ಶಕ್ರಾದಿನುತ ಚರಣಾಭರಣಾ 1

ಮಧ್ವ ಮುನೀಶಾ ಶುದ್ಧ ಪ್ರಕಾಶಾ

ಪದ್ಮನಾಭ ಮನಶುದ್ಧಿಯ ನೀಡೋ 2

ಕಾಮಿತ ಫಲದಾ ಕೋಮಲ ಪಾದಾ

ಶ್ರೀ ಮನೋಹರ ಸುರ ಕಾಮ್ಯ ಪ್ರದಾತಾ 3

ಉಡುಪಿಯ ನಿಲಯಾ ಮೃಡ ಸುರ ಪ್ರೀಯಾ

ಧೃಡಮನ ಕೊಡು ನಿನ್ನಡಿಯಲಿ ಜೀಯಾ 4

ಗೋಪಿಯ ತನಯಾ ನೀ ಪಿಡಿ ಕೈಯ್ಯಾ

ಗೋಪಾಲಕೃಷ್ಣವಿಠ್ಠಲ ಹೇ ಜೀಯ್ಯಾ 5

****