kruti by ವರದೇಶ ವಿಠಲರು varadesha vittala dasaru
ಗಿರಿಜಾಪತಿ ತವ ಚರಣಕೆ ಎರಗುವೆ
ಕರುಣದಿಂದೆನ್ನನು ಪೊರೆ ಮಹಾದೇವ ಪ
ನಂದಿವಾಹನ ಸುರವೃಂದ ಸುಪೂಜಿತ
ಇಂದ್ರವಿನುತ ಭಕ್ತಾನಂದದಾಯಕನೇ 1
ರುಂಡ ಮಾಲಾಧರ ಶುಂಡಾಲ ಮದಹರ
ಚಂಡವಿಕ್ರಮ ಮೃಕಂಡಜ ವರದ 2
ಭೂಜಗ ವಿಭೂಷ ವಿಜಯ ಸುಪೋಷ
ಅಜಿನಾಂಬರಧರ ತ್ರಿಜಗವಂದಿತನೆ 3
ಗರಕಂಧರ ಹರ ಸುರಗಂಗಾಧರ
ಸ್ಮರಸಂಹರ ನಿಜ ಶರಣರಪಾಲ 4
ವರದೇಶ ವಿಠಲನನಿರುತದಿ ಸ್ಮರಿಸುವ
ಕರುಣಾಕರಭವಹರ ಶಂಕರ ಶಿವ 5
***