Showing posts with label ಹರಿಯೇ ಪರದೈವ ಹರವಿರಿಂಚಾದಿಗಳು ಅವನ purandara vittala. Show all posts
Showing posts with label ಹರಿಯೇ ಪರದೈವ ಹರವಿರಿಂಚಾದಿಗಳು ಅವನ purandara vittala. Show all posts

Saturday, 7 December 2019

ಹರಿಯೇ ಪರದೈವ ಹರವಿರಿಂಚಾದಿಗಳು ಅವನ purandara vittala

ರಾಗ ಶಂಕರಾಭರಣ ಅಟತಾಳ

ಹರಿಯೇ ಪರದೈವ ||ಪ||
ಹರವಿರಿಂಚಾದಿಗಳು ಅವನ ಸೇವಕರಯ್ಯ ||ಅ||

ಒಬ್ಬನು ನಮ್ಮ ಹರಿ ಒಬ್ಬೊಬ್ಬರಲ್ಲಿರುವ
ಒಬ್ಬರ ವಶವಲ್ಲ ಸರ್ವ ಸ್ವತಂತ್ರ
ಒಬ್ಬರ ನುಡಿಗಳಿಗೆ ಉಬ್ಬಿ ನಡೆದಾಡುವ
ಒಬ್ಬೊಬ್ಬರಿಗೆ ಬಲು ದೂರನಾಗುವನು ||

ಒಬ್ಬರ ಬೇಡಿಸುವ ಒಬ್ಬರಿಂದ ನೀಡಿಸುವ
ಒಬ್ಬೊಬ್ಬರಿಗೆ ಅನ್ನ ಉಣಿಸುವನೊ
ಒಬ್ಬರ ಸೇವೆಗೆ ಒಲಿದು ನಿಲ್ಲುವನಯ್ಯ
ಒಬ್ಬರ ಹಿಂದ್ಹಿಂದೆ ತಿರುಗುವನೊ ||

ಒಬ್ಬನೇ ಮಲಗಿರುವ ಆಲದ ಎಲೆ ಮೇಲೆ
ಒಬ್ಬೊಬ್ಬರನು ತನ್ನ ಉದರದಿ ಇಟ್ಟು
ಒಬ್ಬನೇ ನಿಲ್ಲುವ ಶಾಶ್ವತ ಮೂರ್ತಿ
ಒಬ್ಬನೇ ಪರದೈವ ತಂದೆ ಪುರಂದರವಿಠಲ ||
***

pallavi

hariyE paradaiva

anupallavi

hara virincAdigaLu avana sEvakarayya

caraNam 1

obbanu namma hari obbobbaralliruva obbara vashavalla sarva svatantra
obbara nuDigaLige ubbi naDedADuva obbobbarige balu dUranAguvanu

caraNam 2

obbara bEDisuva obbarinda nIDisuva obbobbarige anna uNisuvano
obbara sEvage olidu nilluvanayya obbara hindinde tiruguvano

caraNam 3

obbane malagiruva Alada ele mEle obbobbaranu tanna udharadi iTTu
obbane nilluva shAshvata mUrti obbane paradaiva tande purandara viTTala
***