Showing posts with label ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು vidyaratnakara teertha. Show all posts
Showing posts with label ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು vidyaratnakara teertha. Show all posts

Saturday 1 May 2021

ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು vidyaratnakara teertha

 ಶ್ರೀ ವಿದ್ಯಾರತ್ನಾಕತೀರ್ಥ ಶ್ರೀಪಾದಂಗಳವರ ದೇವರ ನಾಮಗಳು ಮೋಹಕ ಶೈಲಿಯ ಮಾಧುರ್ಯದ ಪರಿಚಯವನ್ನು ಈ ಕೆಳಗಿನ ಪದ್ಯಗಳು ಒದಗಿಸಿ ಕೊಡುತ್ತವೆ. 

ಬೆಟ್ಟದ ಶೃಂಗವ ಹತ್ತಿ -

ಧುಮುಕುವೆ ನಾನು ।

ಕೃಷ್ಣನೇ ಸರ್ವೋ-

ತ್ತಮತ್ತಾರಿಲ್ಲವೆಂದೂ ।। 

ಪಂಕಜಾಸನಾ ಹಿಪ -

ಶಂಕರಾದಿಗಳು ಹರಿಗೆ ।

ಕಿಂಕರರು ಮತ್ತು -

ಇವಗೆ ಪುತ್ರ ಪೌತ್ರರು ।

ಏಕೋ ನಾರಾಯಣ ಆಸೀನ್ನ -

ಬ್ರಹ್ಮೇತಿ ಶ್ರುತಿಯೊಂದೇ ।

ಸಾಕೊ ಮತ್ತಿನ್ಯಾಕೆ ಸಂಶಯ -

ಹರಿ ನೀನೆ ಗತಿಯೆಂದು ।।

ಯಂಕಾಮಯೇ ಯೆಂಬ ಶ್ರುತಿ -

ಪಂಕಜಾಸನಾನಿಲ ।

ಶಂಕರರೆಲ್ಲರೂ ಹರಿ -

ಕಿಂಕರ ಸಿರಿಗೆ ।

ಕಿಂಕರರೆಂಬುದ -

ನಿಶ್ಶಂಕವಾಗಿ ಪೇಳಲು ।

ಶಂಕೆಯಾಕೆ ಸಲಹೋ ಶ್ರೀ -

ಪಂಕಜಲೋಚನವೆಂದು ।।

***