Showing posts with label ಬಾರೋ ಬೇಗನೆ ಶ್ರೀಧರ ಗುಣಾಕರ karpara narahari. Show all posts
Showing posts with label ಬಾರೋ ಬೇಗನೆ ಶ್ರೀಧರ ಗುಣಾಕರ karpara narahari. Show all posts

Monday, 2 August 2021

ಬಾರೋ ಬೇಗನೆ ಶ್ರೀಧರ ಗುಣಾಕರ ankita karpara narahari

ಬಾರೋ ಬೇಗನೆ ಶ್ರೀಧರ ಗುಣಾಕರ ಪ


ಬಾರೋ ಬೇಗನೆ ಪಾದವಾರಿಜಕೆರಗುವೆ

ಧಾರುಣಿಯನು ಪೊತ್ತ ಚಾರು ಪರಿಯಂಕಕ್ಕೆಅ.ಪ


ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ

ಭಾರವನಿಳುಹಿದ ಶೌರ್ಯದ ಮಂಚಕೆ1


ರಾಮನ ಶೇವಿಸಿ ಪ್ರೇಮವನು ಪಡೆದಂಥ

ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ 2


ಸಾಸಿರವದನದಿ ಶ್ರೀಶನೆ ತವಗುಣ

ಲೇಶ ವರ್ಣಿಸುವಂಥ ಭಾಸುರ ತಲ್ಪಕೆ 3


ಇಂದಿರದೇವಿಯು ನಿಂದಿರುವಳು ತವ

ಸುಂದರ ಚರಣಾರವಿಂದವ ತೋರಿಸು 4


ಶರಣರ ಪೊರೆವ ಕಾರ್ಪರನರಶಿಂಹನೆ

ಹರಗೆ ಭೂಷಣವಾದ ಉರಗಪರ್ಯಂಕಕೆ5

***