Showing posts with label ಪಂಢರಪುರವಾಸ ಪಾಲಿಸೊ ಶ್ರೀಶ bheemesha krishna PANDARAPURAVAASA PAALISO SHREESHA. Show all posts
Showing posts with label ಪಂಢರಪುರವಾಸ ಪಾಲಿಸೊ ಶ್ರೀಶ bheemesha krishna PANDARAPURAVAASA PAALISO SHREESHA. Show all posts

Saturday, 11 December 2021

ಪಂಢರಪುರವಾಸ ಪಾಲಿಸೊ ಶ್ರೀಶ ankita bheemesha krishna PANDARAPURAVAASA PAALISO SHREESHA



ಪಂಢರಪುರವಾಸ ಪಾಲಿಸೊ ಶ್ರೀಶ   ಪ


ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ

ಗಟ್ಯಾಗಿ ನಿಂತಿದ್ದ ವಿಠೋಬ ದಯಮಾಡೊ 1


ಪಾಂಡುರಾಯನ ಸುತ ಗಾಂಡೀವರ್ಜುನ ದೂತ

ಬಂಡಿ ನಡೆಸಿದಾತ ಪುಂಡರೀಕ್ವರದನೀತ2


ಮುಕುತಿದಾಯಕ ಮುದ್ದು ರುಕುಮಿಯ ರಮಣನೆ

ಭಕುತ ವತ್ಸಲಯೆನಗೆ ಸಕಲಾಭೀಷ್ಟವ ನೀಡೊ 3


ಬುಕ್ಕಿ ್ಹಟ್ಟು ತುಳಸಿಮಾಲೆ ಕಟ್ಟಿ ಕೊರಳಿಗೆ ಹಾಕಿ

ಅಪ್ಪಿಕೊಂಡರೆ ಸಾರೂಪ್ಯ ಕೊಡುವ ದಾತ 4


ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ

ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲ್ಲಿಟ್ಟಿ 5


ಸೃಷ್ಟಿಸ್ಥಿತಿಯು ಜನಸಂರಕ್ಷಣೆ ಮಾಡಿ ನಿನ್ನ

ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ 6


ಕಂಬದೊಳಗೆ ನಿಂತ ಪುರಂದರದಾಸರು

ವಂದನೆಮಾಡೆ ಇವರೆ ನಾರಂದರೆಂದು ನಾ ತಿಳಿದೆ 7


ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ

ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ 8


ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ

ಭೀಮೇಶಕೃಷ್ಣನ ಧ್ಯಾನ ಮಾಡುವೋದ್ವೈಕುಂಠಸ್ಥಾನ 9

***