ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ |
ಶ್ರೀ ಭೂರಮಣನ ತನಯೆ||
ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು |
ಇನ್ನು ನೀ ಮರಿಸದೇ |
ಪುಣ್ಯನರನ ಮಾಡೊ ಪೂತೋಭಾವದಿಂದ |
ಧನ್ಯ ಜನ ಮಾನ್ಯೆ
ಭಕ್ತಜನ ಪ್ರಸನ್ನೇ||೧||
ಶಿವ ನಿನ್ನ ಶಿರದಲ್ಲಿ ಧರಿಸಿದ ಕಾರಣ
ಪವಿತ್ರಾಂಗನಾದನೆಂದು |
ಅವನಿಯೊಳಗೆ ಮಹಾ |
ಕವಿಜನ ಪೇಳಿದ| ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ||೨||*
ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ |
ಹಾರಿಹೋಗುವದು ಸಿದ್ದ |
ಶ್ರೀರಮಣ ವಿಜಯವಿಠ್ಠಲರೇಯನ ಪಾದ|
ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವದು ||೩|*
*******
ತುಂಗಾ ನದಿಯ ತೀರ.
ಶ್ರೀಪಾದರಾಜರು ಪ್ರತಿಷ್ಠಿತ ಅಶ್ವಥ್ಥನರಸಿಂಹ ದೇವರ ಸನ್ನಿಧಿ.ಸ್ನಾನ ಆಹ್ನೀಕಗಳನ್ನು ಮುಗಿಸಿ ಕಟ್ಟಿಯ ಮೇಲೆ ಕುಳಿತಿದ್ದಾರೆ.ಶರದೃತು ಹೈಮಂತ ಋತುಗಳ ಸಂಗಮ ಕಾಲ.ತುಂಗಾ ನದಿ ಪರಮಪ್ರಶಾಂತಳಾಗಿ ಹರಿಯುತ್ತಾ ಇದ್ದಾಳೆ.
ತಕ್ಷಣ ಶ್ರೀವಿಜಯದಾಸರ ಮನಸ್ಸು ಕಾಶಿಯ ಕಡೆಗೆ ಹೊರಟಿದೆ.. ಮನಸ್ಸಿನ ಒಳಗಡೆ ಗಂಗಾದೇವಿ ಯನ್ನು ಸ್ಮರಣೆಯನ್ನು ಮಾಡಿದ್ದಾರೆ.
ಅಮ್ಮ !!ಭಾಗೀರಥಿ!! ಇವಾಗೆ ಕೆಲದಿನಗಳ ಹಿಂದೆ ನಿನ್ನಲ್ಲಿ ಸ್ನಾನ ಮಾಡಿ ಅದರಿಂದ ಆದ ಸುಖಾನುಭವದಿಂದ ಮತ್ತೆ ಅಲ್ಲಿ ಗೆ ಬರಬೇಕೆಂಬ ಆತುರತೆ ಹೆಚ್ಚಾಗುತ್ತಿದೆ.ಬಂದು ಬಿಡೋಣವೆಂದರೆ ಬಹುದೂರ ನಿನ್ನ ಸ್ಥಳ.
ಹೀಗೆ ಮನಸ್ಸಿನ ಒಳಗಡೆ ಗಂಗಾದೇವಿಯನ್ನು ಮತ್ತು ಗಂಗಾಪಿತನನ್ನು ಸ್ಮರಣೆಯನ್ನು ಮಾಡುತ್ತಾ ಇರುವಾಗ ತಕ್ಷಣ ದಲ್ಲಿ ಒಂದು ಕೃತಿಯನ್ನು ರಚನೆ ಮಾಡುತ್ತಾರೆ.
ಶ್ರೀ ವಿಜಯದಾಸರ ಅಂತರಂಗ ಸ್ತೋತ್ರ ಕ್ಕೆ ಮತ್ತು ತನ್ನ ತಂದೆಯ ಪರಮ ಭಕ್ತರಾದ ಶ್ರೀಭೃಗು ಋಷಿಗಳ ಪ್ರಾರ್ಥನೆಗೆ ಗಂಗಾದೇವಿಯು ಪ್ರಸನ್ನ ಳಾದಳು..
ಆ ಕಾಲದಲ್ಲಿ ತುಂಗಾ ನದಿಯಲ್ಲಿ ಗಂಗಾದೇವಿ ಪ್ರವೇಶ ಮಾಡಿದಳು.
ಎಲ್ಲರು ನೋಡ ನೋಡುತ್ತಾ ಇರುವಂತೆಯೆ ತುಂಗಭದ್ರಾ ನದಿಯಲ್ಲಿ ನೀರು ಉಕ್ಕೇರುತ್ತಾ ಬಂತು..
ಹೆಚ್ಚುತ್ತಾ ಹೆಚ್ಚುತ್ತಾ ಬಂದ ನೀರು ತುಂಗಾ ನದಿಯ ನೀರಿಗಿಂತ ಸ್ಪಷ್ಟವಾಗಿ ಬಿಳುಪಾಗಿ ಕಂಡಿತು..
ಬಂದಂತಹ ಗಂಗಾದೇವಿಯು ಶ್ರೀಅಶ್ವಥ್ಥ ನರಸಿಂಹ ದೇವರ ಪಾದವನ್ನು ಅಭಿಷೇಕ ಮಾಡಿದಳು..
ನೋಡುವ ಜನರಿಗೆ ಗಂಗಾದೇವಿ ದಾಸರಿಗೆ ಜಲ ಅಭಿಷೇಕ ಮಾಡುವಳೋ ಎಂದು ತೋರಿತು.
ಜನರಿಗೆ ಗಾಭರಿಯಾಗಿ ಆಕಸ್ಮಿಕ ವಾಗಿ ನದಿಯು ಉಕ್ಕೇರಿ ಬಂದು,ಕಟ್ಟಿಯ ಮೇಲೆ ಧ್ಯಾನಕ್ಕೆ ಕುಳಿತ ದಾಸರು ನದಿಗೆ ಹರಿದು ಹೋಗುವರೇನೋ ಎಂದು ಭಯದಿಂದ ನೂರಾರು ಜನ ಓಡೋಡಿ ಬಂದರು.
ಆ ನಂತರ ಶ್ರೀ ವಿಜಯಪ್ರಭುಗಳು ಗಂಗಾದೇವಿ ಯನ್ನು ಆದರಿಸಿ ಇಂದು ನಮ್ಮ ಊರಿಗೆ ಪ್ರಾದೂಭೂರ್ತಳಾದೆಯಮ್ಮ ಎಂದು ಸಂತೋಷಿಸಿ ಅನೇಕ ವಿಧವಾದ ಪೂಜೆಯನ್ನು ಮಾಡಿ ಮರದ ಬಾಗಿಣವನ್ನು ಮುತ್ತೈದೆ ಯರಿಂದ ಕೊಡಿಸಿದರು..
ಇದನ್ನು ಶ್ರೀ ಗೋಪಾಲ ದಾಸರು ತಮ್ಮ ಕರುಣಾ ಕವಚ ವೆಂಬ ೨೧ ನುಡಿಯ ಕೃತಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ತುಂಗಾತೀರದಿ ಕುಳಿತು ಮೇಲಕೆ ಉದಕ ಗಂಗೆ ಉಕ್ಕಿಸಿ|
ತೋರ್ದೆ ವಿಜಯರಾಯ•|
🙏ಶ್ರೀ ಕೃಷ್ಣಾರ್ಪಣ .ಮಸ್ತು🙏
ಸ್ಮರಿಸಿದವರ ಅಘನಾಶನ| ಸ್ಮರಿಸಿದವರ ಅಘನಾಶ|
ಗುರು ವಿಜಯರಾಯರ ಚರಣಾಬ್ಜ ಸಾರಿದವ| ದುರಿತಾಬ್ದಿ ಮೀರಿದವ ಹರಿಪುರವ ಸೇರಿದವನೊ
🙏ಜೈ ವಿಜಯರಾಯ🙏
******