by ಗೋವಿಂದದಾಸ
ನಿನ್ನ ನೋಡಿ ಧನ್ಯನಾದೆನೋ ಓ ಲಕ್ಷ್ಮೀರಮಣಾಮನ್ನಿಸೆನ್ನ ಮರೆಯ ಹೊಕ್ಕೆನೊ ಪನ್ನಗೇಂದ್ರಶಯನ ನಿನ್ನಪಾದನಂಬಿದೆನ್ನ ಮನ್ನಿಸದೆಮರೆವರೇನೋ ಘನ್ನ ಓ ಶ್ರೀ ಕೃಷ್ಣಮೂರ್ತಿ ಪಲಾಲಿಸೆನ್ನ ಮಾತನೊಂದನೂಶ್ರೀಕೃಷ್ಣಮೂರ್ತಿ ಪಾಲಿಸೆನ್ನಪ್ರೀತಿಯಿಂದಿನ್ನೂ ಬಾಲಬುದ್ಧಿಯಿಂದ ಗೈದಹಾಳುಕೃತ್ಯವನ್ನು ಮರೆತು ಕಾಲನೊಶಕೆಕೊಡಿಸದೆನ್ನ ಪಾಲಿಸಯ್ಯ ಲಕ್ಷ್ಮೀರಮಣ 1
ಒಡೆಯ ನೀನೆಂದೆಂಬುದರಿಯದೆಓ ಲಕ್ಷ್ಮೀರಮಣ ಮಡುವಧುಮುಕಿದಾನೆಯಂತಾದೆಒಡಲ ಸುಖವೆ ಬಯಸಿಗೈವಪಿಡಿದ ಮಡದಿ ಮಕ್ಕಳೆಂಬಕಡು ಮಮತೆಯಿಂದ ನಿನ್ನಅಡಿಯ ಭಜಿಸದಾದೆ ಕೃಷ್ಣಾ 2
ಮೋಸಹೋದೆನಿನಿತು ತಿಳಿಯದೇ ಶ್ರೀಕೃಷ್ಣಮೂರ್ತಿಗಾಸಿಯಾದೆ ಮಾಯಾಕೊಳಗಾದೆಆಸೆ ಪಾಶಗಳಲಿ ಸಿಕ್ಕಿ ಈಸು ಸುಖವನಿನಿತು ಕಾಣೆಕೇಶವಾ ಗೋವಿಂದ ನಿನ್ನದಾಸನೆನಿಸೆ ಲಕ್ಷ್ಮೀರಮಣ 3
*******