Showing posts with label ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು sirigovinda vittala. Show all posts
Showing posts with label ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು sirigovinda vittala. Show all posts

Monday, 2 August 2021

ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು ankita sirigovinda vittala

ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು

ಶಿಷ್ಟರ ನಡತೆಲ್ಲೆಲ್ಲೂ ಗುರುವೇ ಬಲು

ಕಷ್ಟದೊಳಗೆ ನಾ ಮುಳುಗಿರುವೆ ನೀ

ಕೊಟ್ಟ ಅಭಯದಿಂ ಬದುಕಿರುವೆ

ಸಿಟ್ಟು ಮಾತ್ರ ನೀನಾಗ ಬೇಡ ಪೊರೆ

ಜಿಷ್ಣುಸಾರಥಿಯ ಪ್ರೀಯ ಮಗುವೆ ಬಾ ಬಾ ಗುರುವೆ ಪ

ನೀ ಮಾಡಿದ ಉಪಕಾರಕೆ ಪ್ರತಿ ನಭಭೂಮಿ

ಇತ್ತರು ಸರಿಯಿಲ್ಲ

ಈ ಮಾತು ಹೊರಗೆ ಪೇಳುವವಲ್ಲಾ

ನಾ ನಿದ್ದೆ ಪೂರ್ವದಲಿ ಅತಿ ಖುಲ್ಲಾ

ಶಿಲೆಯನು ಸುಂದರ ಮೂರ್ತಿಗೈದತೆರ

ಬಲು ವಿಧದಲಿ ಸಲಹಿದಿಯಲ್ಲ ಹರಿಬಲ್ಲಾ

e್ಞÁನವಿತ್ತಿ ಹರಿಪಾದದಲ್ಲಿ ಅಭಿಮಾನವಿತ್ತಿ ಸುಖವೆಲ್ಲಾ

ಬಲುಹೇಯವೆಂದು ತಿಳಿಸಿದಿಯಲ್ಲಾ

ಮೇಲ್ವರದಿ ರಂಗನೊಲಿಯುವ ಸೊಲ್ಲಾ

ಅಸನ ವಸನಗಳು ಕೊಟ್ಟು ಕೊನೆಗೆ ತುಚ್ಛಿಸುವ ನಿನ್ನ

ಗುಣ ತಿಳಿಯಲಿಲ್ಲಾ ಇದು ಥsÀರವಲ್ಲಾ

ನಿನ್ನ ಪಾದವೇ ಸಡಗರ ಸಿರಿ

ಮೇಲೆ ಸುರಪುರಿ e್ಞÁನನಿಧಿ ಥsÉರಿ

ಕಾಶಿ ಗಯಾ ಮಧುರಿ ಹರಿ ಓಂ ಓಂ ಓಂ

ನಿನ್ನ ನಾಮ ದುರಿತವೆಂಬೊ ಕರಿ

ಕುಲಕೆ ಘನ ಹರಿ

ಎಂದು ಈ ಪರಿ ತಿಳಿದೆನೆಲೊಧೊರಿ ಹರಿ ಓಂ ಓಂ ಓಂ

ಇನ್ನಾದರು ಕೋಪವತ್ವರಿ

ಕರುಣಿ ಕಣ್ತೆರಿ

ಸುತಗೆ ಸುಖಗರಿ

ತೋರೋ ನಿನ್ನ ಮಾರಿ ಹರಿ ಓಂ ಓಂ ಓಂ

ಎನ್ನಯ ಬಿsÀಷ್ಟಗಳನ್ನು ನೀಡದಿರೆ

ನಿನ್ನ ವಿಮಲ ಕೀರ್ತಿಗೆ ಗುರುವೆ ಕುಂದನ್ನು ಬಿಡದೆ

ತಿಳಿ ನಾ ತರುವೆ

ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣು

ಸಾರಥಿಯ ಪ್ರಿಯ ಮಗುವೆ ಬಾ ಬಾ ಗುರುವೆ 1

ಪಂಥವೇ ಹೇ ಮಹಾಕಾಂತ ಪ್ರಿಯ ನಿನ್ನ

ಸಂತತಿಯೊಳು ಸೂರಿಗಳೊಡೆಯ

ನೀನೆಂತು ಪೊಂದಿದೈ ನಿರ್ಭಿಡಿಯಾ

ಇದು ಸಂತರು ಕೇಳಿದರಾಶ್ಚರ್ಯ

ವಂತರು ಆಗರೆ ಸಾಕು

ಮುಂದೆಯನ್ನಂತರಂಗವೇ ತವನಿಲಯ

ಆಗಲಿ ಜೀಯಾ

ಕಂದನ ಕಾಯುವದಂತು ಸಹಜ ಸಿರಿ

ಹಿಂದಕೆ ಪಾಂಡವನೆಂಭಿರಿಯಾ ಆ

ಗಂಧರ್ವನ ಮಗನಾದ ಗಯಾ ತಾ

ಬಂದು ಹೋಗಲವನನು ಮೊರೆಯ

ಸಿಂಧು ಜಪನ ಸಹ ಲಕ್ಷಿಸದಲೆ ತ್ವರ

ತಂದು ಕೊಟ್ಟನವನಿಗೆ ವಿಜಯಾ

ಮೇಲ್ಹರಿಯದಯಾ

ಇದು ಅಲ್ಲದೆ ಬಹು ಭಕ್ತರು e್ಞÁನಯುಕ್ತರು

ಸುಧಿಯ ಭೋಕ್ತರು

ಭವ ವಿಮುಕ್ತರು ಹರಿ ಓಂ ಓಂ ಓಂ

ನೆನೆದವರ ದು:ಖ ಬಿಡಿಸಿದರು

ಪಾಪ ಕೆಡಿಸಿದರು ಮತಿಯನಿಡಿಸಿದರು

ಸುಧೆಯ ಬಡಿಸಿದರು

ಹರಿ ಓಂ ಓಂ ಓಂ

ಬಲು ಹಿತದಿ ಶುಭವ ಕೋರಿದರು

ತಾಪ ಹೀರಿದರು

ವಾಕ್ಯ ಸಾರಿದರು

ಹರಿಯ ತೋರಿದರು ಹರಿ ಓಂ ಓಂ ಓಂ

ನೀನಾದರೂ ಬಹಳರ ಪೊರದಿ

ಈ ಹೀನ ಓರ್ವ ನಿನ್ನಗೆಯರವೆ ಮರಿಯಬ್ಯಾಡ ಕರುಣೆ

ನಾ ಕರವ ಮುಗಿವೆ ಸಿಟ್ಟು ಮಾತ್ರ ನೀನಾಗ ಬೇಡ2

`ಶಿರಿಗೋವಿಂದ ವಿಠಲ' ಪರ ಖರೆ ಆದರು

ಗುರುವಿಲ್ಲದ ಗತಿಯನ್ನು

ಧರೆತ್ರಯದಿ ತೋರು ತುಸು ನೋಡೋಣ ಗಿರಿಧರಿಯ ಬಿಟ್ಟು

ನಿಲ್ಲುವುದೇನು

ಗುರುವೆ ತ್ರಿಟಿಯ ಬಿಟ್ಟೊರುಷವಾಗುತದೆ ಹಿರಿಯರಿ ಪೇಳ

ವದಿನ್ನೇನು ಹೇ |

ಸುರಧೇನು ಗುರುವೆ ಸುಖದ ಖಣಿ ಗುರುತನುಮಣಿ

ಗುರುವೆ ಮುಕುಟ ಮಣಿ ಸುಜನರಿಗೆ ಹೀಗೆಂದು

ತಿಳಿದೆ ನಾ ಮನದಾಗೆ

ಪರಕಿಸಿದೆನ್ನನು ಪೊರೆಯೆ ಯನುತ ಬಾ

ಯ್ತೆರೆಯುತ ಮಣಿಸುವೆ ಶಿರನಿನಗೆ ಮೂಜಗದಾಗೆ |

ನಿನ್ನಿಂದ ಎನಗೆ ಸದ್ಬುದ್ಧಿ ಯೋಗದಾಸಿದ್ಧಿ

ಕಾರ್ಯದಾಸಿದ್ಧಿ ಸ್ವರ್ಗದಾಸಿದ್ಧಿ ಹರಿ ಓಂ ಓಂ ಓಂ

ನಿನ್ನಿಂದ ಪಡೆದ ವಿe್ಞÁನ ಹರಿಯರಾ ಖೂನಾ ಲೋಕದೊಳು

ಮಾನ ಮುಕ್ತಿ ಸೋಪಾನ ಹರಿ ಓಂ ಓಂ ಓಂ

ನೀನೇವೆ ಯನಗೆ ಆಭರಣ ಝಗಝಗಿಪ ವಸನ

ಶ್ರೀಹರಿಯ ಚರಣ ವಿರಜಾನದಿ ಸ್ನಾನ ಹರಿ ಓಂ ಓಂ ಓಂ

ನಿನ್ನೊಮ್ಮೆ ನೆನಸೆ ಪವಮಾನ ಕಾಯ್ವ ಪ್ರತಿದಿನ

ಇದಕೆ ಅನುಮಾನ ಇಲ್ಲ ಏನೇನ ಹರಿ ಓಂ ಓಂ ಓಂ

ಗಡ ಕೇಳ್ವಡೆಯನೆ

ಕಡೆ ನುಡಿಯನ್ನದು ಭಿಡೆಯ ಇಡದೆ

ನಾನುಡಿವೆ ಎನ್ನ ಮರೆತರೆ ಮಂಗನು ನೀ ನಿಜವೆ 3

****