ಕಾಖಂಡಕಿ ಶ್ರೀ ಮಹಿಪತಿರಾಯರು
ಉಪಾಧಿ ರಹಿತ P
ಆಶ್ರೈಸಿಹ್ಯ ದಾವನು ಶ್ರಯಧೇನು ನಾಸ್ತಿಕ್ಯವಗೆಲ್ಲಿಹುದು ತಾನು 1
ಇವ್ಹದಾವನು ಸುರತರುವಿನ ಬಲಿ(ಳಿ?) ಯು ಅವಗೆಲ್ಲಿಹುದುದರದ ಕಳವಳಿಯು 2
ಸುರನದಿಯಲ್ಲಿ ದಾವನ ಸಹವಾಸ ಧರೆಯೊಳಗವಗೆಲ್ಲಿಹ ಮಹಾ ದೋಷ 3
ರವಿ ಪ್ರಭೆಯೊಳು ದಾವನಿಹನು ಕೂಡಿ ಅವಗೆಗೆಲ್ಲಿಯ ಕಗ್ಗತ್ತಲೆ ನೋಡಿ 4
ದಾವ ಮಹಿಪತಿ ಗುರು ಪಾದ್ಹೊಂದಿಹ್ಯ ಅವಗೆಲ್ಲಿಹದು ತಾ ಭವಬಂಧ 5
***