Showing posts with label ವಾದಿರಾಜ ಗುರು ದಯಮಾಡೊ ಎನ್ನಾ ಪಾದಾ indiresha vadiraja stutih. Show all posts
Showing posts with label ವಾದಿರಾಜ ಗುರು ದಯಮಾಡೊ ಎನ್ನಾ ಪಾದಾ indiresha vadiraja stutih. Show all posts

Monday, 2 August 2021

ವಾದಿರಾಜ ಗುರು ದಯಮಾಡೊ ಎನ್ನಾ ಪಾದಾ ankita indiresha vadiraja stutih

ವಾದಿರಾಜಗುರು ದಯಮಾಡೊ ಎನ್ನಾ, ಪಾದಾನತನನ್ನಾವಾದಿಸಂಘವನು ಭೇದಿಸಿದ್ಯೊ ಘನ್ನಾ ಹಯವದನನ್ನಾಮೋದದಿಂದ ಹೃದಿ ನೋಡಿದೆಯೊ ರನ್ನಾಸಾಧುಸಂಗವನು ಪರಿಪಾಲಿಸಿನ್ನಾ ಋಜುಗಣ ಮೋಹನ್ನ 1

ಕೃಷ್ಣದರ್ಶನಕೆ ತುಷ್ಟಿಸಿ ನೀ ಬಂದು ಮಾರ್ಗದಲಿ ನಿಂದುದುಷ್ಟ ದೈತ್ಯನುವಾದಕ ಬರಲಿಂದುಇಟ್ಟಿಯಾ ಆನಂದ ಭಟ್ಟರಲ್ಲಿ ಭಾರರಸ ಕರುಣಾಪೂರ 2

ಶ್ರೇಷ್ಠ ನಿನ್ನಯ ದೃಷ್ಟಿಯ ರಸದಿಂದಾ ವಾದಿಯ ಕರದಿಂದಾಕೊಟ್ಟ ಪತ್ರವನು ತಿರುಗಿಸಲಾನಂದಾ ಭಟ್ಟರಿಗೆ ನೀಕೊಟ್ಟಿಯೊ ಪರಿರಂಭಾ ಮಾಡದಲೆ ವಿಲಂಬಾ 3

ನೀಡಿದ ಪತ್ರದ ನೋಡುತ ಬಹು ಚರಿತಾ ಆನಂದವಬಿಡುತಾ ಬೇಡಿರಿ ವರಗಳ ನೀಡುವೆ ನಾನೆನುತಾನೀಡಿದ್ಯೊ ಮನ ಸಮಗಾಡನೆ ಸುತಗೀತಾ ನಿಮಗಾಗಲೆನುತಾ 4

ತಂದೆ ನಿನ್ನ ದಯದಿಂದಲಿ ವಂಶಾ ಬೆಳೆದಿತೊ ಸುಯಶಾಇಂದು ನೋಡೊ ಹತಬಂಧನ ಭವಪಾಶಾಕಂದ ನಾನು ನಿನಗಿ ಇಂದಿರೇಶ ದಾಸಾ ಋಜುಗಣದೊಳಗೀಶಾ 5

*****