RSS song .
ಸಮರಸ ಭಾವದ ಸರಿಗಮ ಸ್ವರದಲಿ
ಹೊಸ ಹಾಡೊಂದನು ಹಾಡೋಣ |
ತರತಮವಿಲ್ಲದ ಸರಿಸಮ ಸೂತ್ರದಿ
ಹೊಸ ನೋಡೊಂದನು ಕಟ್ಟೋಣ ||
ಜೈ ಜೈ ಮಾತಾ ಭಾರತ ಮಾತಾ ಜೈ ಜೈ ಮಾತಾ ಭಾರತ ಮಾತಾ ||ಪ||
ಕುಡಿಯುವ ಜಲ ಉಸಿರಾಡುವ ಗಾಳಿ
ನಡೆದಾಡುವ ನೆಲ ನಮಗೊಂದೇ |
ನಮ್ಮ ಶರೀರದ ಕಣಕಣಗಳಲಿ
ಹರಿಯುವ ನೆತ್ತರು ತಾನೊಂದೇ ||೧||
ಜಾತಿ ಭೇಧಗಳ ಮೇಲುಕೀಳುಗಳ
ಬೇರು ಸಹಿತ ಕಿತ್ತೆಸೆಯೋಣ |
ಬಂಧುತ್ವದ ಭಾವೈಕ್ಯದ ನಂಟಲಿ
ಹೃದಯ ಹೃದಯಗಳ ಬೆಸೆಯೋಣ ||೨||
ಸೋಲು ಗೆಲುವುಗಳು ನೋವು ನಲಿವುಗಳು
ಬದಲಿಸದಿರಲಿ ಬದ್ಧತೆಯ |
ರೋಷ ದ್ವೇಷಗಳ ಕಿದಿಸುಡದಿರಲಿ
ನವನಿರ್ಮಾಣದ ಸಿದ್ಧತೆಯ ||೩||
ಅಂಜಿಕೆ ಅಸಹನೆ ಅಸ್ಪೃಶ್ಯತೆಗೆ
ಅಂತ್ಯ ವಿದಾಯವ ಸಾರೋಣ |
ಸಾಮರಸ್ಯದ ಸಿರಿ ಸಂದೇಶವ
ನಾಡಿನೊಳೆಲ್ಲಡೆ ಬೀರೋಣ ||೪||
***
samarasa BAvada sarigama svaradali
hosa hADoMdanu hADONa |
taratamavillada sarisama sUtradi
hosa nODoMdanu kaTTONa ||
jai jai mAtA BArata mAtA jai jai mAtA BArata mAtA ||pa||
kuDiyuva jala usirADuva gALi
naDedADuva nela namagoMdE |
namma SarIrada kaNakaNagaLali
hariyuva nettaru tAnoMdE ||1||
jAti BEdhagaLa mElukILugaLa
bEru sahita kitteseyONa |
baMdhutvada BAvaikyada naMTali
hRudaya hRudayagaLa beseyONa ||2||
sOlu geluvugaLu nOvu nalivugaLu
badalisadirali baddhateya |
rOSha dvEShagaLa kidisuDadirali
navanirmANada siddhateya ||3||
aMjike asahane aspRuSyatege
aMtya vidAyava sArONa |
sAmarasyada siri saMdESava
nADinoLellaDe bIrONa ||4||
***