by ಪ್ರಸನ್ನವೆಂಕಟದಾಸರು
ಕೆಡಗೊಡದಿರು ಎನ್ನ ಚಿತ್ತಗತಿಯ ಸುರರೊಡೆಯ ತವಾಂಘ್ರಿ ಹೊಂದಿದ ಮತಿಯ ಪ.
ಒಂದು ಗುರಿಗಿಟ್ಟರೆ ತಪ್ಪುತಿದೆ ಮತ್ತೊಂದಕಿಡದೆ ತಾ ತಗಲುತಿದೆಹೊಂದಲೊಲ್ಲದು ತ್ವನಿಷ್ಠೆಯನು ಒಣದಂದುಗಗೊಳುತಿದೆಹರಿನೀನು1
ಮುಂದಿಟ್ಟ ಷಡ್ರಸಾನ್ನವನುಣ್ಣದು ದೂರಿಂದ ನಿಸ್ಸಾರಕ್ಹೆಣಗುವುದುನಂದಿಸಲೊಲ್ಲದು ನೆಳಲ್ವಿಡಿದು ಕಿಚ್ಚೆಂದಂಜದೋಡಿ ಧುಮುಕುತದಿದು 2
ಪ್ರದೇಶ ಅಂಗುಟ ಮಾತ್ರವ ಕಾಣದೆ ತಾಭೂದಿವಿ ಪಾತಾಳಕೈದುತಿದೆಮಾಧವಪ್ರಸನ್ನವೆಂಕಟ ದಯಾಳು ನಿನ್ನಪಾದದಲ್ಲಿಡು ಇದರುಲುಹು ಬಲು 3
******