..
ಜನನಿ ಪಾಲಿಸೆ ಶುಭಾಂಗಿ ಸಲೆ ದಯದಿ ವಲಿಸುತಲಿ
ಪಾಲಾಬ್ಧಿ ಬಾಲೆ ಶೀಲೆ ಪ
ವಾರಿಜಾರೊ ಸಹೋದರಿಯೆ | ಮೂರು ಭುವನೋದ್ಧಾರಿ
ಚಾರುಗಾತ್ರಿ ಶ್ರೀರಮಣಿ | ದೂರ ನೋಡದಿ ಬಾರೆ ಮನೆಗೆ 1
ದಾತೆ ಖ್ಯಾತೆ ಮಾತೆ | ಸುಜನೋಪಕಾರಿ
ಸೀತಾಮಾತೆ ಭೂತರುಣಿ ಜಾತೆ | ಪಾವನಿ ಪ್ರೀತೆ ಸದಯೆ 2
ಶಾಮಸುಂದರ ರಾಣಿಯೆ ಸುರ |
ಸ್ತೋಮವಂದಿತೆ ತ್ರಿಗುಣಮಾನಿ
ಭಾಮೆ ಭಾಗ್ಯದಾಯಕಿಯೆ ಪ್ರೇಮವಾರಧಿ ಬೀರು ದಯವ 3
***