..
kruti by ವರದೇಶ ವಿಠಲರು varadesha vittala dasaru
ದಾಸನೆನಿಸು ಜೀಯಾ ಶ್ರೀ ವರದೇಶ ವಿಠಲರಾಯಾ
ದಾಸರಥಿಯೆ ಯನ್ನಾಶೆ ತಳೆದು ನಿರ್ದೋಷನೆನಿಸಿ
ಬಹು ಮೀಸಲು ಮನವಿತ್ತು ಪ
ವರದೇಂದ್ರರ ಆಜ್ಞಾದಿಂದಲಿ
ಗುರುವರ ಮಹಾಪ್ರಾಜ್ಞಾ
ವರದೇಶ ವಿಠಲೆಂಬ ಗುರುತಿನ ಮುದ್ರಿಕೆ
ಪರಮ ಪಾಮರಗೆ ತ್ವರ ಕರುಣಿಸಿದಕೆ 1
ಜ್ಞಾನ ಶೂನ್ಯ ನಾನು ಸರ್ವದ
ಹೀನ ವಿಷಯ - ರತನು
ವಾನರನ ತರದಿ ಮಾಣಿಕೆಂಬ ತೆರ
ಹೀನನೆನಿಸದಲೆ ಪೋಣಿಸು ಸನ್ಮತಿ2
ಏಸು ಪೇಳಲಿನ್ನಾ ಶ್ರೀ ವರ-
ದೇಶ ವಿಠಲ ನಿನ್ನಾ
ದಾಸರ ವಚನಕೆ ದೋಷ ಬಾರದಂತೆ
ಲೇಸು ಭಕುತಿ ಜ್ಞಾನ ದಾಸ್ಯವಿತ್ತು ತವ 3
***