Showing posts with label ಒಲ್ಲೆನೀ ಕವಚ ಕುಂಡಲಗಳನ್ನು ಒಲ್ಲೆ ನಾನು ಕಿರೀಟ ಪಾದುಕೆಗಳನ್ನು vaikunta vittala. Show all posts
Showing posts with label ಒಲ್ಲೆನೀ ಕವಚ ಕುಂಡಲಗಳನ್ನು ಒಲ್ಲೆ ನಾನು ಕಿರೀಟ ಪಾದುಕೆಗಳನ್ನು vaikunta vittala. Show all posts

Sunday, 1 August 2021

ಒಲ್ಲೆನೀ ಕವಚ ಕುಂಡಲಗಳನ್ನು ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಒಲ್ಲೆನೀ ಕವಚ ಕುಂಡಲಗಳನ್ನು

ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ಪ


ಹಗಲು ಹಾದರಗಿತ್ತಿಯಂತಿಪ್ಪ ಮನುಜನಿಗೆ

ಸೊಗಸುವುದು ಸೊಗಸದೆಂಬರುಹಿಲ್ಲದೇ

ಜಗದುದರ ನಿನ್ನಿಂದ ಶೋಭಿಸುವನಘ್ರ್ಯದ ವ

ಸ್ತುಗಳ ಎನಗೀಯಲೇತಕೆ ಮೆಚ್ಚಿದೆಯೋ ದೇವ 1


ನೋಡಲೆವೆ ಸೀವುದಿದನಿಟ್ಟು ಕೈಕೊಂಡ ಪ್ರಾಣ

ಗೂಡಿನೊಳಗಿಹುದೇ ಅಕಟಕಟ ಹರಿಯೇ

ಬೇಡವೀ ಮಾಯ ಕೃಪೆಯಿಂದ ಸದ್ಭಕುತಿಯ

ಜೋಡ ತೊಡಿಸಿದನೊಲ್ಲೆ ಕಾಡಬೇಡವೋ ದೇವ 2


ಶಿರಕೆ ಕರ್ಣಕೆ ಚರಣಗಳಿಗೆ ಕಥೆಯನ್ನು ಪೇ

ಳ್ದೆರಗುವುದನೊಲಿದು ಕುಣಿದಾಡುವುದನು

ಕರುಣಿಪುದು ಕವಚ ಕುಂಡಲ ಕಿರೀಟಗಳನು

ವರ ಪಾದುಕೆಗಳ ನಾನೊಲ್ಲೆ ಹರಿಯೇ 3


ನಿನ್ನ ದಾಸಾನುದಾಸ ದಾಸರ ಗುಣಾರ್ಣವದೊ

ಳೆನ್ನೊಳೆಳ್ಳನಿತುಂಟೆ ಅಕಟಕಟ ಹರಿಯೇ

ಬನ್ನಬಡಿಸಲು ಬೇಡ ದಕ್ಕದೀಯುಡುಗೊರೆಯು

ಚುನ್ನವಾಡುವರು ಧಾತ್ರಿಯ ಮನುಜರೆಲೆ ದೇವ 4


ಇದನು ಕೊಡಬೇಕಾದಡೆಯು ಮುಕ್ತ್ಯಾಂಗನೆಯ

ಮದುವೆಯನು ಮಾಡಿ ಯಾಬಳಿಕನಿತ

ವೊದವಿಸುವುದುಚಿತ ಒಪ್ಪಂದವಾಗಿಹುದು

ಚದುರ ವೈಕುಂಠ ವೇಲಾಪುರಾಧೀಶ 5

***