Showing posts with label ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು gurumahipati. Show all posts
Showing posts with label ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು gurumahipati. Show all posts

Wednesday, 1 September 2021

ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು 



ನೆನೆವರಾ ಹೊರೆಯಲು' ಅನುವಾಗಿ ಬಂದಿರಲು । 

ಮನುಜ ಮೈ ಮರೆವರೆ ನೀನು ೧ 



ಮನವೆಂಬ ಕರುಬಿಟ್ಟು ಘನ ಭಕ್ತಿ ಮುರವಿಟ್ಟು | 

ತನುವಿನ ಪಾತ್ರೆಲಿ ನೀನು ಫಿ 



ಕರುಣದಾ ಕೆಚ್ಚಲು ತೊರೆದು ಭೊರ್ಗರೆಯಲು | 

ಅರಿವೆಂಬ ಕೃಯಿಂದ ನೀನು ೩ 



ಗುರು ಮಹಿಪತಿಕಂದಗರುಹಿದ ನಿಜಾನಂದ 

ಸಿರಿಸುಖವ ಪಡೆಯಲು ನೀನು ೪ 



ಕಾಖಂಡಕಿ ಕೃಷ್ಣದಾಸರ ಕೀರ್ತನೆಗಳು

***


ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು ಪ 


ನೆನೆವರಾ ಹೊರೆಯಲು ಅನುವಾಗಿ ಬಂದಿರಲು | ಮನುಜ ಮೈ ಮರೆವರೆ ನೀನು 1 

ಮನವೆಂಬ ಕರುಬಿಟ್ಟು ಘನ ಭಕ್ತಿ ಮುರವಿಟ್ಟು | ತನುವಿನ ಪಾತ್ರೆಲಿ ನೀನು 2 

ಕರುಣದಾ ಕೆಚ್ಚಲು ತೊರೆದು ಭೊರ್ಗರೆಯಲು | ಅರಿವೆಂಬ ಕೈಯಿಂದ ನೀನು 3 

ಗುರು ಮಹಿಪತಿಕಂದಗರುಹಿದ ನಿಜಾನಂದ ಸಿರಿಸುಖವ ಪಡೆಯಲು ನೀನು 4

***